ರಿಯೊ ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ಭಯಾನಕ ಕ್ಷಣಗಳಿಗೆ ಸಾಕ್ಷಿಯಾಗಿರುವ ನಡುವೆ, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಡೆದ ಇನ್ನೊಂದು ಅಪಘಾತ ಮನಸ್ಸನ್ನು ಕಲಕುತ್ತದೆ.
ಹಂಗರಿಯ ವೇಟ್‌ಲಿಫ್ಟರ್ ಜಾನೋಸ್ ಬರಾನ್‌ಯಾಯಿ 148 ಕೆಜಿ ಭಾರವನ್ನು ಎತ್ತಲಾಗದೇ ಭುಜಗಳ ಮೇಲೆ ಹಾಕಿಕೊಂಡಿದ್ದರಿಂದ ಬರಾನ್‌ಯಾಯಿಯ ಬಲ ತೋಳು ಸಾಕೆಟ್‌ನಿಂದ ಹೊರಗೆಬಂದು ತೀವ್ರ ನೋವಿನಿಂದ ಕೂಗಿದರು. ಪುರುಷರ 77 ಕೆಜಿ ವಿಭಾಗದ ತೂಕ ಎತ್ತುವ ಸ್ಪರ್ಧೆಯಲ್ಲಿ ಈ ಘಟನೆ ಸಂಭವಿಸಿತ್ತು.
ಚೀನಾದ ವೈದ್ಯರು ಅವರ ಬಲದೋಳನ್ನು ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೇ ಜೋಡಿಸಿದರು. ಬರಾನ್‌ಯಾಯಿ ಹಂಗರಿಗೆ ತೆರಳಿದ ಬಳಿಕ ಆಸ್ಪತ್ರೆಯಲ್ಲಿ ಮೂರು ವಾರಗಳ ಪುನಶ್ಚೇತನ ಕ್ರಿಯೆಯಲ್ಲಿ ಭಾಗಿಯಾಗಿದ್ದರು.