ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಬ್ರೆಜಿಲ್‌ನ ಅಘೋಷಿತ ಎದುರಾಳಿ ವಿಸೆಂಟೆ ಲೊಹಾಯ್‌ನಿ ತನಗೆ ಪಂದ್ಯದಲ್ಲಿ ಅಚ್ಚರಿ ಮೂಡಿಸಿದ್ದಾಗಿ ಹೇಳಿದರು. ಮೊದಲ ಸುತ್ತು ಯಾವಾಗಲೂ ಸಮಸ್ಯೆಯಿಂದ ಕೂಡಿದ್ದು ಕೃಿಷ್ಟಕರವಾಗಿರುತ್ತದೆ ಎಂದು ಸೈನಾ ಹೇಳಿದರು.
ಬ್ರೆಜಿಲಿಯನ್ ಆಟ ಖಂಡಿತ ನನಗೆ ಅಚ್ಚರಿ ಮೂಡಿಸಿತು. ಗುಂಪು ಅವರಿಗೆ ಬೆಂಬಲವಾಗಿ ಕೂಗುತ್ತಿದ್ದರಿಂದ ಅವರಿಗೆ ಸ್ವದೇಶಿ ಅನುಕೂಲವಿತ್ತು. ಅವರ ಮನೋಸ್ಥೈರ್ಯ ಚೇತರಿಕೆಗೆ ಅದು ಕಾರಣವಾಗಿತ್ತು ಎಂದು ಸೈನಾ 39 ನಿಮಿಷಗಳಲ್ಲಿ 21-17, 21-17 ಜಯದ ಬಳಿಕ ಹೇಳಿದರು.
ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ಪಂದ್ಯವೂ ಕಠಿಣವಾಗಿರುತ್ತದೆ. ಬ್ರೆಜಿಲ್‌ನಲ್ಲಿ ಕ್ರೀಡೆ ವರ್ಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸ್ಥಳೀಯ ಪ್ರೇಕ್ಷಕರಿಂದ ಅವಳಿಗೆ ಒಳ್ಳೆಯ ಬೆಂಬಲ ಸಿಕ್ಕಿದೆ ಎಂದು ಹೇಳಿದರು.