ರಿಯೊ ಒಲಿಂಪಿಕ್ಸ್ ಸಂಘಟಕರು ತರಾಟೆಗೆ ತೆಗೆದುಕೊಂಡ ಬಳಿಕ, ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ತಾವು ಯಾವುದೇ ವಿವಾದಕ್ಕೆ ಸಿಕ್ಕಿರುವ ವರದಿಯನ್ನು ಅಸಂಬದ್ಧ ಎಂದು ತಳ್ಳಿಹಾಕಿದ್ದಾರೆ. ತಾವು ಎಲ್ಲಾ ನಿಯಮಗಳನ್ನು ಅನುಸರಿಸುತ್ತಿದ್ದು, ಕ್ರೀಡಾ ಮನೋಭಾವಕ್ಕೆ ಪೂರ್ಣ ಬದ್ಧರಾಗಿರುವುದಾಗಿ ತಿಳಿಸಿದರು.
ರಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯು ಭಾರತದ ಒಲಿಂಪಿಕ್ ತಂಡದ ಉಸ್ತುವಾರಿ ರಾಕೇಶ್ ಗುಪ್ತಾ ಅವರಿಗೆ ಪತ್ರ ಬರೆದು ಗೋಯೆಲ್ ಅವರ ದುರಾಕ್ರಮಣದ ಮತ್ತು ಒರಟಾದ ನಡವಳಿಕೆಯಿಂದ ಮತ್ತು ಮಾನ್ಯತೆಯಿಲ್ಲದ ವ್ಯಕ್ತಿಗಳನ್ನು ಕ್ರೀಡಾಕೂಟದ ಅಕ್ರೆಡಿಟೆಡ್ ಪ್ರದೇಶಗಳಿಗೆ ಮಾತ್ರ ಕರೆತರುವ ಯತ್ನದ ಹಿನ್ನೆಲೆಯಲ್ಲಿ ಗೋಯೆಲ್ ಮಾನ್ಯತೆ ರದ್ದುಮಾಡುವುದಾಗಿ ಬೆದರಿಕೆ ಹಾಕಿದ್ದರು.
ಆದರೆ ತಾವು ಸಂಘಟಕರ ಜತೆ ಯಾವುದೇ ಜಟಾಪಟಿಗೆ ಇಳಿದಿರುವುದನ್ನು ಗೋಯೆಲ್ ತಳ್ಳಿಹಾಕಿದ್ದು, ಕೆಲವು ತಪ್ಪುತಿಳಿವಳಿಕೆ ಉಂಟಾಗಿದೆ ಎಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ