ನವದೆಹಲಿ: ಭಾರತದ ವೃತ್ತಿಪರ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಮಾಜಿ ಡಬ್ಲ್ಯುಬಿಸಿ ಐರೋಪ್ಯ ಚಾಂಪಿಯನ್ ಕೆರ್ರಿ ಹೋಪ್ ಅವರ ವಿರುದ್ಧ ಜಯಗಳಿಸುವ ಮೂಲಕ ಡಬ್ಲ್ಯುಬಿಒ ಏಷ್ಯಾ ಪೆಸಿಫಿರ್ ಸೂಪರ್ ಮಿಡಲ್‌ವೇಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
30 ವರ್ಷದ ವಿಜೇಂದ್ರನ್ 34 ವರ್ಷದ ವೆಲ್ಷ್‌ನಲ್ಲಿ ಜನಿಸಿದ ಆಸ್ಟ್ರೇಲಿಯನ್ ಕೆರ್ರಿ ಹೋಪ್ ವಿರುದ್ಧ ದಾಖಲೆಯ ತಮ್ಮ ಏಳನೇ ಜಯವನ್ನು ಸಾಧಿಸಲು ಎಲ್ಲಾ 10 ಸುತ್ತುಗಳಲ್ಲಿ ಸೆಣಸಾಟ ನಡೆಸಿದರು. 6 ಅಡಿ ಎತ್ತರದ ಹರ್ಯಾಣದ ಬಾಕ್ಸರ್ ಹೋಪ್ ವಿರುದ್ಧ 98-92, 98-92 ಮತ್ತು 100-90 ಪಾಯಿಂಟ್‌ಗಳಿಂದ ಜಯಗಳಿಸಿ ಸರ್ವಾನುಮತದ ವಿಜೇತರೆನಿಸಿದರು.
ಕ್ರೀಡೆ, ರಾಜಕೀಯ ಮತ್ತು ಮನರಂಜನೆ ಉದ್ಯಮದ ನೂರಾರು ಜನರು ವಿಜೇಂದರ್ ಸೆಣೆಸಾಟವನ್ನು ನೋಡಿ ಕಣ್ತುಂಬಿಕೊಂಡರು. ವಿಜೇಂದರ್ ತಮ್ಮ ಬಿರುಸಿನ ಮುಷ್ಠಿಪ್ರಹಾರಗಳ ಮೂಲಕ ಮೇಲುಗೈ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಹೋಪ್ ಆರಂಭದಲ್ಲಿ ಗೆಲ್ಲುವುದಕ್ಕೆ ಪ್ರಯತ್ನಿಸಿದರೂ ವಿಜೇಂದರ್ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ವಿಜೇಂದರ್ ಆರಂಭದಿಂದಲೂ ನಾಕ್ ಔಟ್ ಪೆಟ್ಟು ಹೊಡೆಯಲು ನೋಡುತ್ತಿದ್ದರು. ಕೆರಿ ಕೂಡ ಆಕ್ರಮಣಕಾರಿ ಆಟವಾಡಿದರೂ ಕೂಡ ಆಸ್ಟ್ರೇಲಿಯನ್ ಸರಿಯಾದ ಪಂಚ್ ಹೊಡೆಯಲು ವಿಫಲರಾಗುತ್ತಿದ್ದರು. ಪಂದ್ಯದ ನಂತರ ತಾವು ಇಲ್ಲಿಗೆ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೆ, ಸೆಲಿಬ್ರಿಟಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಧನ್ಯವಾದ ಸೂಚಿಸುವುದಾಗಿ ವಿಜೇಂದರ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.