Select Your Language

Notifications

webdunia
webdunia
webdunia
webdunia

ಮೊದಲ ಟೆಸ್ಟ್ ಆಯ್ಕೆ ಕುರಿತು ಚಿಂತಿಸುತ್ತಿಲ್ಲ: ಲೋಕೇಶ್ ರಾಹುಲ್

lokesh rahul
ಬಸಟ್ಟೆರೆ: , ಶನಿವಾರ, 16 ಜುಲೈ 2016 (20:20 IST)
ಎರಡು ಅಭ್ಯಾಸ ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ, ಭಾರತದ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಅಕ್ಷರಶಃ ಟೆಸ್ಟ್ ಸ್ಥಾನಕ್ಕೆ ಹಕ್ಕು ಪ್ರತಿಪಾದನೆ ಮಾಡಿದಂತಾಗಿದೆ. ಆಯ್ಕೆಯು ನನ್ನ ನಿಯಂತ್ರಣದಲ್ಲಿರುವುದಿಲ್ಲ. ಟೆಸ್ಟ್ ಆರಂಭಕ್ಕೆ ಇನ್ನೂ ಒಂದು ವಾರವಿದ್ದು, ಕೆಲವು ದಿನಗಳಲ್ಲಿ ಯಾರು ಆಡುತ್ತಾರೆ, ಯಾರು ಆಡುವುದಿಲ್ಲ ಎಂದು ಗೊತ್ತಾಗುತ್ತದೆ ಎಂದು ಡಬ್ಲ್ಯುಐಸಿಬಿ ಅಧ್ಯಕ್ಷರ ಇಲೆವನ್ ವಿರುದ್ಧ ಎರಡನೇ ದಿನದಾಟದ ನಂತರ ಹೇಳಿದರು.
 
ಇಲ್ಲಿಗೆ ಬೇಗನೇ ಬಂದು ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ನಮ್ಮ ಉಪಾಯವಾಗಿತ್ತು. ನಾನು ಕಳೆದ ಎರಡು ಇನ್ನಿಂಗ್ಸ್‌ಗಳಲ್ಲಿ ಆಡಿದ ರೀತಿಯಿಂದ ಸಂತಸಗೊಂಡಿದ್ದೇನೆ. ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅದು ನೆರವಾಗಿದೆ. ಇಲ್ಲಿನ ಹವಾಮಾನ ತೀವ್ರ ತಾಪಮಾನ ಮತ್ತು ತೇವಾಂಶದಿಂದ ಕೂಡಿದೆ.

ಇಲ್ಲಿ ರನ್ ಗಳಿಸುವುದು ಅಷ್ಟೊಂದು ಸುಲಭವಲ್ಲ. ನಾನು ಈಗ ಚೆನ್ನಾಗಿ ಸಿದ್ದವಾಗಿದ್ದೇನೆಂದು ಎಂದುಕೊಂಡಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಪಿಎಲ್: ತಲ್ಲಾವಾಹ್ಸ್ ತಂಡವನ್ನು ಪಾರು ಮಾಡಿದ ಶಕೀಬ್, ಗೇಲ್