Select Your Language

Notifications

webdunia
webdunia
webdunia
webdunia

ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ರನ್ನು ಗೊರಿಲ್ಲಾ ಎಂದ ಕಮೆಂಟೇಟರ್!

ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ರನ್ನು ಗೊರಿಲ್ಲಾ ಎಂದ ಕಮೆಂಟೇಟರ್!
Melbourne , ಶನಿವಾರ, 21 ಜನವರಿ 2017 (09:58 IST)
ಮೆಲ್ಬರ್ನ್:  ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿರುವ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಹೋದರಿ ವೀನಸ್ ವಿಲಿಯಮ್ಸ್ ರನ್ನು ವೀಕ್ಷಕ ವಿವರಣೆಕಾರ ಗೊರಿಲ್ಲಾ ಎಂದು ಕುಚೋದ್ಯ ಮಾಡಿದ್ದಾರೆ.
 

ಇದಕ್ಕಾಗಿ ತನ್ನ ನೌಕರಿಯನ್ನೂ ಕಳೆದುಕೊಂಡಿದ್ದಾರೆ. ಡಗ್ ಅಡ್ಲರ್ ಎಂಬ ಕಾಮೆಂಟೇಟರ್ ಈ  ರೀತಿ ಕೃಷ್ಣವರ್ಣೀಯ ಆಟಗಾರ್ತಿ ವೀನಸ್ ರನ್ನು ಕುಚೋದ್ಯ ಮಾಡಿದಾತ. ಟಿವಿ ವಾಹಿನಿಯೊಂದಕ್ಕೆ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡುತ್ತಿದ್ದ ಅಡ್ಲರ್ ಈ ಎಡವಟ್ಟು ಮಾಡಿಕೊಂಡಿದ್ದಾನೆ.

ಬುಧವಾರ ನಡೆದಿದ್ದ ಪಂದ್ಯದಲ್ಲಿ ವೀನಸ್ ಎದುರಾಳಿ ಸ್ಟೆಪಿನ ವಿರುದ್ಧ ಮೊದಲ ಸೆಟ್ ಗೆದ್ದುಕೊಂಡಾಗ ಅಡ್ಲರ್ ಗೊರಿಲ್ಲಾ ರೀತಿ ವೀನಸ್  ಎದುರಾಳಗೆ ಬಿಸಿ ಮುಟ್ಟಿಸಿದರು ಎಂದು ಸಂಬೋಧಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ಮೇಲೆ ಅಡ್ಲರ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಅವಸ್ಥೆ ನೋಡಿ ಆಸ್ಟ್ರೇಲಿಯಾಕ್ಕೆ ನಡುಕ ಶುರುವಾಗಿದೆಯಂತೆ!