Publish Date: Sat, 21 Jan 2017 (09:37 IST)
Updated Date: Sat, 21 Jan 2017 (09:49 IST)
ಸಿಡ್ನಿ: ಇಂಗ್ಲೆಂಡ್ ತಂಡ ಭಾರತದಲ್ಲಿ ಸೋಲುತ್ತಿರುವ ಪರಿ ಕಂಡು ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡಕ್ಕೆ ನಡುಕ ಶುರುವಾಗಿದೆಯಂತೆ. ಅದಕ್ಕಾಗಿ ಈಗಾಗಲೇ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದೆ.
ಭಾರತಕ್ಕೆ ಬಂದಾಗಿನಿಂದ ಒಂದು ಅಭ್ಯಾಸ ಪಂದ್ಯದಲ್ಲಿ ಜಯಗಳಿಸಿದ್ದು ಬಿಟ್ಟರೆ ಇಂಗ್ಲೆಂಡ್ ಟೆಸ್ಟ್ ಅಥವಾ ಏಕದಿನದಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸೋಲಿನ ರೀತಿ ಹೀನಾಯವಾಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ತಿಂಗಳು ಪ್ರವಾಸ ಕೈಗೊಳ್ಳಲಿರುವ ತನ್ನ ತಂಡಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ.
ಯಾವುದೇ ಕಾರಣಕ್ಕೂ ಟಿವಿ ನೋಡಬೇಡಿ. ಇಂಗ್ಲೆಂಡ್ ಮತ್ತು ಭಾರತದ ಮೊದಲೆರಡು ಏಕದಿನ ಪಂದ್ಯಗಳ ವಿಡಿಯೋ ನೋಡಿದರೆ ಆಟಗಾರರ ಮನೋಸ್ಥೈರ್ಯ ಕುಗ್ಗುವುದು ಖಂಡಿತಾ. ಹಾಗಾಗಿ ಟಿವಿ ಆನ್ ಮಾಡಲೇ ಬೇಡಿ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಸಕ್ತ ಸರಣಿ ಆಸೀಸ್ ನ ಸ್ಟೀವ್ ಸ್ಮಿತ್ ಬಳಗಕ್ಕೆ ಎಚ್ಚರಿಕೆಯ ಕರೆಗಂಟೆ ಇದ್ದಂತೆ ಎಂದು ಕ್ರಿಕೆಟ್ ಮಂಡಳಿ ಎಚ್ಚರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ