ನವದೆಹಲಿ: ನಾಳೆ ದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಭುತ ಬಾಕ್ಸಿಂಗ್ ಪಂದ್ಯವೊಂದು ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಆನ್ ಲೈನ್ ಟಿಕೆಟ್ ಗಳು ಮಾರಾಟವಾಗಿದೆ. ಸಾಮಾನ್ಯರಿಂದ ಹಿಡಿದು ಗಣ್ಯ ಅಭಿಮಾನಿಗಳೂ ಈ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.
ಕ್ರಿಕೆಟರ್ ಸೆಹ್ವಾಗ್ ಈಗಾಗಲೇ ತಮ್ಮ ಸ್ನೇಹಿತನ ಪಂದ್ಯವನ್ನು “ಚೆಕಾ ಕೊ ವಿಜು ನೆ ಫೆಕಾ” ಸಿನಿಮಾ ಎಂದು ಬಿರುದು ಕೊಟ್ಟಿದ್ದಾರೆ. ವೃತ್ತಿಪರ ಬಾಕ್ಸಿಂಗ್ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಮಿಡ್ಲ್ ವೇಟ್ ಚಾಂಪಿಯನ್ ಶಿಪ್ ನ ಪಂದ್ಯದಲ್ಲಿ ವಿಜೇಂದರ್ ನಾಳೆ ಮಾಜಿ ವಿಶ್ವಚಾಂಪಿಯನ್ ಹಾಲಿ ಏಷ್ಯಾ ಪೆಸಿಫಿಕ್ ಚಾಂಪಿಯನ್ ಫ್ರಾನ್ಸಿಸ್ ಚೆಕಾ ಅವರನ್ನು ಎದುರಿಸಲಿದ್ದಾರೆ.
ಇದುವರೆಗೆ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಸೋಲು ಕಾಣದ ವಿಜೇಂದರ್ ಈ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಎದುರು ಆಡುತ್ತಿರುವುದರಿಂದ ಮತ್ತಷ್ಟು ಉತ್ಸಾಹ ಹೆಚ್ಚಿದೆ. ಇಬ್ಬರ ನಡುವೆ ಈಗಾಗಲೇ ಮಾತಿನ ಯುದ್ಧ ಆರಂಭವಾಗಿದೆ. ಕಣದಲ್ಲಿ ನಡೆಯುವ ಹೋರಾಟಕ್ಕೆ ನಾಳೆಯವರೆಗೆ ಕಾಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ