ಅರ್ಜೈಂಟೀನಾ: ಫುಟ್ ಬಾಲ್ ನ ಜನಪ್ರಿಯ ಆಟಗಾರ ಲಿಯಾನೋಲಾ ಮೆಸ್ಸಿ ಎಂದರೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳಿಗೆ ಆರಾಧ್ಯ ದೈವ. ಅರ್ಜೈಂಟೀನಾದ ಈ ಆಟಗಾರ ಮದುವೆಯಾಗುವ ಮನಸ್ಸು ಮಾಡಿದ್ದಾರಂತೆ. ಹಾಗಾದರೆ ಹುಡುಗಿ ಯಾರು?
ಬೇರಾರೂ ಅಲ್ಲ. ತಮ್ಮ ಬಹುಕಾಲದ ಗೆಳತಿ ಆಂಟೋನೆಲಾ ರೊಕುಝೂ ಅವರನ್ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಮುಂದಿನ ವರ್ಷ ಮೆಸ್ಸಿ ವೇಳಾಪಟ್ಟಿಯನ್ನು ನೋಡಿಕೊಂಡು ಮದುವೆ ನಡೆಯಲಿದೆ ಎಂದು ಕೆಲವು ಸ್ಪಾನಿಷ್ ಮಾಧ್ಯಮಗಳು ವರದಿ ಮಾಡಿವೆ.
ಮೆಸ್ಸಿ ಅರ್ಜೈಂಟೀನಾ ಫುಟ್ ಬಾಲ್ ತಂಡದ ಯಶಸ್ವೀ ನಾಯಕರಾಗಿದ್ದರು. ಆದರೆ ಸತತ ಸೋಲಿನಿಂದ ಕಂಗೆಟ್ಟ ನಂತರ ಫುಟ್ ಬಾಲ್ ಆಟಕ್ಕೇ ಗುಡ್ ಬೈ ಹೇಳಿ ಜಗತ್ತನ್ನೇ ಆಘಾತದಲ್ಲಿ ಮುಳುಗಿಸಿದ್ದರು. ಕೊನೆಗೂ ಎಲ್ಲರ ಒತ್ತಾಯಕ್ಕೆ ಮಣಿದು ಮತ್ತೆ ತಂಡಕ್ಕೆ ಆಟಗಾರನಾಗಿ ಮರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ