ಚೆನ್ನೈ: ಅಂತಿಮ ಟೆಸ್ಟ್ ಆರಂಭಕ್ಕೂ ಮುನ್ನ ಅಲೆಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್ ನಲ್ಲಿ 10998 ರನ್ ಮಾಡಿದ್ದರು. ಮೊದಲ ಓವರ್ ನಲ್ಲಿ ಎರಡು ರನ್ ಗಳಿಸುತ್ತಲೇ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಮಾಡಿದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ 15921 ರನ್ ಮಾಡಿ ಅಗ್ರ ಸ್ಥಾನಿಯಾಗಿದ್ದಾರೆ. ಅವರ ನಂತರ ರಿಕಿ ಪಾಂಟಿಂಗ್ 13378 ರನ್ ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಆದರೆ ಸದ್ಯ ಕ್ರಿಕೆಟ್ ಆಡುತ್ತಿರುವವರ ಪೈಕಿ ಕುಕ್ ಮೊದಲಿಗ. ಒಟ್ಟಾರೆ ಪಟ್ಟಿಯಲ್ಲಿ ಅವರಿಗೆ 10 ನೇ ಸ್ಥಾನ. 140 ಟೆಸ್ಟ್ ಪಂದ್ಯಗಳಿಂದ ಕುಕ್ ಈ ಸಾಧನೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ