Select Your Language

Notifications

webdunia
webdunia
webdunia
webdunia

ಸೆಮಿಫೈನಲ್ ಗೇ ಜಾರುತ್ತಿರುವುದೇಕೆ ಭಾರತೀಯ ಕ್ರೀಡಾಪಟುಗಳು?

ಸೆಮಿಫೈನಲ್ ಗೇ ಜಾರುತ್ತಿರುವುದೇಕೆ ಭಾರತೀಯ ಕ್ರೀಡಾಪಟುಗಳು?
ಟೋಕಿಯೋ , ಬುಧವಾರ, 4 ಆಗಸ್ಟ್ 2021 (09:10 IST)
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಹಲವು ಕ್ರೀಡಾಪಟುಗಳು ನಿರ್ಣಾಯಕ ಘಟ್ಟದವರೆಗೆ ತಲುಪಿ ಇನ್ನೇನು ಪದಕ ಸುತ್ತಿಗೆ ತಲುಪಬೇಕು ಎನ್ನುವಾಗ ಜಾರಿ ಬೀಳುತ್ತಿದ್ದಾರೆ.


ಇದಕ್ಕೆ ಬೆಸ್ಟ್ ಉದಾಹರಣೆ, ಭಾರತ ಪುರುಷರ ಹಾಕಿ ತಂಡ, ಕಮಲ್ ಪ್ರೀತ್ ಕೌರ್, ಬಾಕ್ಸರ್ ಸತೀಶ್ ಕುಮಾರ್ ಮುಂತಾದ ಉದಾಹರಣೆ. ಭಾರತ ಈ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಪದಕಕ್ಕೆ ಇನ್ನು ಒಂದು ಹೆಜ್ಜೆ ಇದೆ ಎನ್ನುವಾಗ ಮುಗ್ಗರಿಸಿ ನಿರಾಸೆ ಅನುಭವಿಸಿದ್ದಾರೆ.

ಮಾಜಿ ಕ್ರೀಡಾಪಟುಗಳು, ತಜ್ಞರ ಪ್ರಕಾರ ಇದಕ್ಕೆ ಭಾರತೀಯ ಆಟಗಾರರಿಗೆ ಸಾಕಷ್ಟು ಟೂರ್ನಮೆಂಟ್ ಗಳು, ಪಂದ್ಯಗಳು ಆಡುವ ಅವಕಾಶ ಸಿಗದೇ ಇರುವುದೇ ಕಾರಣ. ಪಂದ್ಯ ಆಡಿದಷ್ಟು ಒತ್ತಡ ನಿಭಾಯಿಸುವ, ನಿರ್ಣಾಯಕ ಹಂತದಲ್ಲಿ ಗೆಲುವು ಸಾಧಿಸುವ ಕಲೆ ತಾನಾಗಿಯೇ ಬರುತ್ತದೆ. ಕೇವಲ ಹಣಕಾಸಿನ ನೆರವು, ಅಭ್ಯಾಸವಷ್ಟೇ ಸಾಲದು. ಸಾಕಷ್ಟು ಪಂದ್ಯಗಳನ್ನು ಆಡಿ ಅನುಭವ ಸಾಧಿಸಿದರೆ ಮಾತ್ರ ದೊಡ್ಡ ಕ್ರೀಡಾಕೂಟಗಳಲ್ಲಿ ಒತ್ತಡ ನಿಭಾಯಿಸಿಕೊಂಡು ಗೆಲುವು ಸಾಧಿಸಲು ಸಾಧ‍್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಗೆದ್ದು ಬಾ ಲೊವ್ಲಿನಾ! ಬಾಕ್ಸರ್ ತಾರೆಯ ಸೆಮಿಫೈನಲ್ ಪಂದ್ಯ ಇಂದು