Select Your Language

Notifications

webdunia
webdunia
webdunia
webdunia

ಭಾರತ ಕೈ ತಪ್ಪಿದ ಫೈನಲ್ ಅವಕಾಶ: ಕಂಚಿಗೆ ಅವಕಾಶ

Tokyo Olympics: India men suffer hockey heartbreak
bangalore , ಮಂಗಳವಾರ, 3 ಆಗಸ್ಟ್ 2021 (20:34 IST)
ಭಾರತ ಹಾಕಿ ತಂಡ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆಘಾತ ಅನುಭವಿಸುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತವಾಗಿದ್ದು, ಕಂಚಿನ ಪದಕ ಗೆಲ್ಲುವ ಅವಕಾಶ ಹೊಂದಿದೆ.
ಬ್ರಿಟನ್ ತಂಡವನ್ನು ಬಗ್ಗುಬಡಿದು 41 ವರ್ಷಗಳ ನಂತರ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಪುರುಷರ ತಂಡ ಸೆಮಿಫೈನಲ್ ನಲ್ಲಿ ಇದೇ ಸಾಧನೆ ಪುನರಾವರ್ತಿಸಲು ವಿಫಲವಾಯಿತು. ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-5 ಗೋಲುಗಳಿಂದ ಸೋಲುಂಡ ಭಾರತ ನಿರಾಸೆ ಅನುಭವಿಸಿತು.
8 ಬಾರಿಯ ಚಿನ್ನದ ಪದಕ ವಿಜೇತ ಭಾರತ ತಂಡ 1980ರ ಮಾಸ್ಕೊ ಒಲಿಂಪಿಕ್ಸ್ ನಂತರ ಒಂದೂ ಚಿನ್ನದ ಪದಕ ಗೆದ್ದಿಲ್ಲ. ಗುರುವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಜರ್ಮನಿಯನ್ನು ಭಾರತ ಎದುರಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್!