ಟೋಕಿಯೋ: ಕಳೆದ 15 ದಿನಗಳಿಂದ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಇಂದು ಅಧಿಕೃತವಾಗಿ ತೆರೆ ಬೀಳಲಿದೆ.
ಇಂದು ವರ್ಣರಂಜಿತ ಕಾರ್ಯಕ್ರಮ, ಸುಡು ಮದ್ದಿನ ಪ್ರದರ್ಶನದ ಮೂಲಕ ಒಲಿಂಪಿಕ್ಸ್ 2020 ಅಧಿಕೃತವಾಗಿ ಮುಕ್ತಾಯವಾಗಲಿದೆ. ಒಟ್ಟು 110 ಪದಕಗಳೊಂದಿಗೆ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ 87 ಪದಕ ಗಳಿಸಿರುವ ದ್ವಿತೀಯ ಸ್ಥಾನದಲ್ಲಿದೆ.
ಭಾರತ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕ ಗೆದ್ದುಕೊಂಡಿದೆ. ಅಂಕಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿದೆ.
ಕೊರೋನಾ ಮಹಾಮಾರಿ ಭೀತಿಯ ನಡುವೆಯೂ ಜಪಾನ್ ಒಲಿಂಪಿಕ್ಸ್ ನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.