Select Your Language

Notifications

webdunia
webdunia
webdunia
webdunia

ಬೆಳ್ಳಿ ಪದಕ ಗೆದ್ದ ಯುವತಿಗೆ ಒಲಿಂಪಿಕ್ ವೇದಿಕೆಯಲ್ಲೇ ಮದುವೆ ಪ್ರಪೋಸ್ ಮಾಡಿದ ಗೆಳೆಯ

ಬೆಳ್ಳಿ ಪದಕ ಗೆದ್ದ ಯುವತಿಗೆ ಒಲಿಂಪಿಕ್ ವೇದಿಕೆಯಲ್ಲೇ  ಮದುವೆ ಪ್ರಪೋಸ್ ಮಾಡಿದ ಗೆಳೆಯ
ರಿಯೊ ಡಿ ಜನೈರೊ , ಮಂಗಳವಾರ, 16 ಆಗಸ್ಟ್ 2016 (19:24 IST)
ಜಗತ್ತಿನಲ್ಲೇ ಅತೀ ದೊಡ್ಡ ಕ್ರೀಡಾ ಕೂಟ ರಿಯೊ ಒಲಿಂಪಿಕ್ಸ್‌ನಲ್ಲಿ ಚೀನಾದ ಡೈವರ್ ಹೈ ಜಿ ಮಹಿಳೆಯರ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್‌ನಲ್ಲಿ ಆಗ ತಾನೇ ಬೆಳ್ಳಿ ಪದಕ ಗೆದ್ದಿದ್ದಳು.  ಆದರೆ ಅವಳ ಗೆಳೆಯ ಕಿನ್ ಕಾಯೈ ಜಾಗತಿಕ ಪ್ರೇಕ್ಷಕರ ಎದುರು, ಟಿವಿ ಕ್ಯಾಮರಾಗಳ ಎದುರು ಮಂಡಿಯೂರಿ ಕೆಂಪು ಮಕಮಲ್ಲಿನ ಚಿಕ್ಕ ಪೆಟ್ಟಿಗೆಯನ್ನು ಹಿಡಿದು ಮದುವೆ ಪ್ರಸ್ತಾಪ ಮಾಡಿದಾಗ ಅವಳ ಕಣ್ಣಿಂದ ಆನಂದಬಾಷ್ಪವನ್ನು ಹರಿಯಿತು. ಬಳಿಕ ಇಬ್ಬರೂ ಆಲಂಗಿಸಿಕೊಂಡಾಗ ಈ ದೃಶ್ಯಗಳನ್ನು ಜಗತ್ತಿನಾದ್ಯಂತ ಬಿತ್ತರಿಸಲಾಯಿತು. 
 
ಅದೃಷ್ಟವಶಾತ್ ಅವಳ ಸ್ನೇಹಿತ ಕಿನ್ ಕಾಯ್ ಕೂಡ ಕಳೆದ ವಾರ ಪುರುಷರ 3 ಮೀಟರ್ ಸ್ಪ್ರಿಂಗ್ ಬೋರ್ಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ.  ಮದುವೆ ಪ್ರಪೋಸ್ ಮಾಡಿದ ಕೂಡಲೇ ಗೆಳತಿ ಒಪ್ಪಿಗೆ ಸೂಚಿಸಿದಳು. ನಾವು ಕಳೆದ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದೆವು. ಆದರೆ ಇಂದು ಅವನು ಪ್ರಪೋಸ್ ಮಾಡುತ್ತಾನೆಂದು ನಾನು ಎಣಿಸಿರಲಿಲ್ಲ. ಇದರಿಂದ ನನಗೆ ಹೃದಯತುಂಬಿ ಬಂತು. ಏಕೆಂದರೆ ನನ್ನ ಜೀವಮಾನ ಪರ್ಯಂತ ಇವನ ಮೇಲೆ ನಂಬಿಕೆ ಇರಿಸಬಹುದೆಂದು ಭಾವಿಸಿದ್ದಾಗಿ ಹೈಜಿ ಹೇಳಿದಳು.
 
ಆದರೆ ಕೆಲವು ವೀಕ್ಷಕರು ಈ ಆಘಾತದ ವಿವಾಹ ಪ್ರಸ್ತಾಪವು ಅವಳು ಒಲಿಂಪಿಕ್ ಪದಕ ಗೆದ್ದ ಸಂಭ್ರಮದಿಂದ ಗಮನಬೇರೆಡೆ ಸೆಳೆಯಿತು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ ಪಾರ್ಕ್‌ನಲ್ಲಿ ನೆಲಕ್ಕೆ ಬಿದ್ದ ಟಿವಿ ಕ್ಯಾಮರಾ : ಏಳು ಮಂದಿಗೆ ಗಾಯ