ಆಘಾತಕಾರಿ ಘಟನೆಯೊಂದರಲ್ಲಿ ರಿಯೊ ಒಲಿಂಪಿಕ್ ಪಾರ್ಕ್‌ನಲ್ಲಿ ಬೃಹತ್ತಾದ ಟೆಲಿವಿಷನ್ ಕ್ಯಾಮೆರಾ ಮೇಲಿನಿಂದ ನೆಲಕ್ಕೆ ಬಿದ್ದು ಏಳು ಮಂದಿ ಗಾಯಗೊಂಡಿದ್ದಾರೆ. ಸ್ಪೈಡರ್‌ಕ್ಯಾಮ್ ಎಂದು ಹೆಸರಾದ ಕಪ್ಪು ಕ್ಯಾಮೆರಾವನ್ನು ಪಾರ್ಕ್‌ನ ದೃಶ್ಯಗಳನ್ನು ಸೆರೆಹಿಡಿಯಲು ಬಳಸಲಾಗುತ್ತಿದ್ದು, ಬ್ಯಾಸ್ಕೆಟ್ ಬಾಲ್ ಸ್ಟೇಡಿಯಂ ಹೊರಗೆ ದಿಢೀರನೇ ನೆಲದ ಮೇಲೆ ಬಿತ್ತು.
ಟ್ವಿಟ್ಟರ್‌ಗೆ ಅಪ್‌ಲೋಡ್ ಮಾಡಲಾದ ವಿಡಿಯೊ ಕ್ಲಿಪ್‌ನಲ್ಲಿ ಇಬ್ಬರು ಮಹಿಳೆಯರಿಗೆ ರಕ್ತ ಸೋರುತ್ತಿದ್ದು ನೆಲದ ಮೇಲೆ ಕುಳಿತಿದ್ದರು. ಒಬ್ಬರಿಗೆ ಮೂಗಿನಿಂದ ರಕ್ತ ಒಸರುತ್ತಿದ್ದು, ಇನ್ನೊಬ್ಬರಿಗೆ ಕೈಯಲ್ಲಿ ರಕ್ತ ಸೋರುತ್ತಿತ್ತು.
ಇನ್ನೊಂದು ವಿಡಿಯೊದಲ್ಲಿ ಸಣ್ಣ ಮೋಟರ್ ಬೈಕ್ ಗಾತ್ರದ ಕ್ಯಾಮರಾ ಎತ್ತರದಿಂದ ಕೆಳಕ್ಕೆ ದಿಢೀರನೇ ಬಿದ್ದ ಬಳಿಕ ಯುವತಿಯನ್ನು ಸ್ಟ್ರೆಚರ್ ಮೂಲಕ ಆಂಬುಲೆನ್ಸ್‌ನಲ್ಲಿ ಒಯ್ಯುತ್ತಿರುವುದನ್ನು ತೋರಿಸಿದೆ.