ರಾಂಚಿ: ಅನೇಕ ಮಂದಿ ಭಾರತೀಯರು ಭಾರತೀಯ ಅಥ್ಲೀಟ್‌ಗಳಿಗೆ ಪದಕಗಳು ಏಕೆ ಸಿಗುತ್ತಿಲ್ಲ ಎಂದು ಅಚ್ಚರಿಪಡುತ್ತಿರಬಹುದು. ಆದರೆ ಜಾರ್ಖಂಡ್‌ನಲ್ಲಿ ಭವಿಷ್ಯದ ಚಾಂಪಿಯನ್ನರಿಗೆ ನೀಡುವ ತರಬೇತಿಯ ವಿಧಾನದಲ್ಲಿ ಇದಕ್ಕೆ ಉತ್ತರ ಸಿಗಬಹುದು.
ಪ್ರತಿ ಬೆಳಿಗ್ಗೆ 16 ವರ್ಷದ ರಾಜ್ಯ ಮಟ್ಟದ ಈಜುಗಾರ್ತಿ ರೇಖಾ ಕುಮಾರಿ ಮತ್ತು ಇತರೆ ಭರವಸೆಯ ಈಜುಗಾರ್ತಿಯರು ರಾಂಚಿಯ ಹೊರಗೆ 10 ಕಿಮೀ ದೂರದಲ್ಲಿ ಸ್ಥಳೀಯ ಡ್ಯಾಮ್‌ವೊಂದರ ಬಳಿಕ ಅಭ್ಯಾಸಕ್ಕೆ ಸೇರುತ್ತಾರೆ. ಈ ಅಣೆಕಟ್ಟು ಮುಂಗಾರಿನಲ್ಲಿ ತುಂಬಿ ಹರಿಯುತ್ತಾ ಅಪಾಯಕಾರಿಯಾಗಿರುತ್ತದೆ.
ಅವರಿಗೆ ಬೇರೆ ಆಯ್ಕೆಯೇ ಇಲ್ಲ. ಈಜು ಒಕ್ಕೂಟವು ಪ್ರತಿಷ್ಠಾನದ ಜತೆ ಸೇರಿ ಬಡತನದ ಹಿನ್ನೆಲೆಯ ಪ್ರತಿಭಾಶಾಲಿ ಈಜುಗಾರರನ್ನು ಗುರುತಿಸಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದಕ್ಕೆ ತರಬೇತಿ ನೀಡುವುದು ಯೋಜನೆಯಾಗಿದೆ.
ಕೆಲವೇ ಕಿಮೀ ದೂರದಲ್ಲಿ 2011ರಲ್ಲಿ ನಿರ್ಮಿಸಿದ ಕ್ರೀಡಾಂಗಣದಲ್ಲಿ ಈಜು ಸಂಕೀರ್ಣವಿದೆ. ಆದರೆ ಕಳೆದ ಎರಡು ವರ್ಷಗಳಿಂದ ಈಜುಕೊಳಕ್ಕೆ ಬೀಗ ಹಾಕಲಾಗಿದ್ದು ಅಧಿಕಾರಿಗಳಲ್ಲೂ ಆ ಪ್ರಶ್ನೆಗೆ ಉತ್ತರಸಿಕ್ಕಿಲ್ಲ. ಈ ಡ್ಯಾಮ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಹೇಗೆ, ಇಲ್ಲಿ ಸೂಕ್ತ ಡೈವಿಂಗ್ ಪಾಯಿಂಟ್‌ಗಳಿಲ್ಲ. ಸರ್ಕಾರ ಏನನ್ನಾದರೂ ಮಾಡಬೇಕು ಎಂದು ಕೋಚ್ ಉಮೇಶ್ ಕುಮಾರ್ ಒಂದು ಗಂಟೆಯ ಅಭ್ಯಾಸದ ಸೆಷನ್ ಬಳಿಕ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ