Select Your Language

Notifications

webdunia
webdunia
webdunia
webdunia

ರಿಯೊ ಒಲಿಂಪಿಕ್ಸ್ ಪಂದ್ಯದಲ್ಲಿ ತಕ್ಷಣದಲ್ಲೇ ರ‌್ಯಾಕೆಟ್ ಬದಲಿಸಿದ ಲಿನ್ ಡಾನ್

ರಿಯೊ ಒಲಿಂಪಿಕ್ಸ್ ಪಂದ್ಯದಲ್ಲಿ ತಕ್ಷಣದಲ್ಲೇ  ರ‌್ಯಾಕೆಟ್ ಬದಲಿಸಿದ ಲಿನ್ ಡಾನ್
ರಿಯೊ ಡಿ ಜನೈರೊ , ಮಂಗಳವಾರ, 16 ಆಗಸ್ಟ್ 2016 (15:26 IST)
ಚೀನಾದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಿನ್ ಡಾನ್ ಪ್ರಸ್ತುತ ರಿಯೊ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಈವೆಂಟ್‌ನಲ್ಲಿ ಚಿನ್ನವನ್ನು ಗೆಲ್ಲುವ ದೊಡ್ಡ ಫೇವರಿಟ್ ಆಟಗಾರ ಎನಿಸಿದ್ದಾರೆ. ಡಾನ್ ಅವರು ಬ್ಯಾಡ್ಮಿಂಟನ್ ಅಂಗಳದಲ್ಲಿ ತಮ್ಮ ಕೌಶಲ್ಯ ಮತ್ತು ವೇಗಕ್ಕೆ ಹೆಸರಾಗಿದ್ದು, ವಿಯೆಟ್ನಾಂ ಗುಯೆನ್ ಟೀನ್ ಮಿನ್ ವಿರುದ್ಧ ಪಂದ್ಯದಲ್ಲಿ 32 ವರ್ಷದ ಲಿನ್ ಡಾನ್ ಯಾರೂ ಊಹಿಸಲಾಗದ ಕೆಲಸವನ್ನು ಮಾಡಿದ್ದಾರೆ. 
 
ಲಿನ್ ಡಾನ್ ಆಟವಾಡುತ್ತಿದ್ದಾಗಲೇ ತಕ್ಷಣದಲ್ಲೇ ಬ್ಯಾಡ್ಮಿಂಟನ್ ರ‌್ಯಾಕೆಟ್ ಬದಲಿಸಿ ತಮ್ಮ ಸ್ವಸ್ಥಾನ ಸೇರಿ ಆಡಿದ್ದನ್ನು ಅಭಿಮಾನಿಗಳು ಅಚ್ಚರಿಯಿಂದ ವೀಕ್ಷಿಸಿದರು. 
 
ಇಂತಹ ಶ್ರೇಷ್ಟ ಬ್ಯಾಡ್ಮಿಂಟನ್ ಆಟಗಾರನನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಎದುರಿಸಿ ಗೆಲ್ಲುವುದಕ್ಕೆ ಭಾರೀ ಸಾಹಸವನ್ನು ಮಾಡಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

 

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಟೆಸ್ಟ್ ಬ್ಯಾಟ್ಸ್‌‍ಮನ್ ಶ್ರೇಯಾಂಕದಲ್ಲಿ ಯೂನಿಸ್ ಐದನೇ ಸ್ಥಾನ