ಯೂನಿಸ್ ಖಾನ್ ಅವರು ನಾಲ್ಕನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಪಂದ್ಯ ಗೆಲುವಿನ ದ್ವಿಶತಕದಿಂದ ಟೆಸ್ಟ್ ಬ್ಯಾಟ್ಸ್‌ಮನ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. 38 ವರ್ಷದ ಯೂನಿಸ್ ಖಾನ್ ಸ್ಟೀವ್ ಸ್ಮಿತ್, ಜೋಯಿ ರೂಟ್, ಕೇನ್ ವಿಲಿಯಂಸನ್ ಮತ್ತು ಹಶೀಮ್ ಆಮ್ಲಾ ಅವರ ಹಿಂದೆ 5ನೇ ಶ್ರೇಯಾಂಕಕ್ಕೆ ಏರಿದರು.
ಟಾಪ್ 4ರಲ್ಲಿ ಯಾವುದೇ ಬದಲಾವಣೆಯಾಗದೇ, ರಹಾನೆ 11ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ. ಭಾರತದ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಮೂರು ಟೆಸ್ಟ್‌ಗಳಲ್ಲಿ ಒಟ್ಟು 243 ರನ್ ಕಲೆಹಾಕಿದ್ದಾರೆ. ಬೌಲರುಗಳ ಪೈಕಿ ಜೇಮ್ಸ್ ಆಂಡರ್‌ಸನ್ ರವಿಚಂದ್ರನ್ ಅಶ್ವಿನ್ ಅವರಿಗಿಂತ 12 ಪಾಯಿಂಟ್ ಮುನ್ನಡೆ ಸಾಧಿಸಿದ್ದಾರೆ.
ಟಾಪ್ 5ರಲ್ಲಿ ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್ ಮತ್ತು ಯಾಸಿರ್ ಶಾಹ್ ಮುಂದಿನ ಮೂರು ಸ್ಥಾನಗಳನ್ನು ಗಳಿಸಿದ್ದಾರೆ. ಅಂತಿಮ ಟೆಸ್ಟ್ ಉಳಿದಿದ್ದು, ಅಶ್ವಿನ್ ಸರಣಿಯಲ್ಲಿ 4ನೇ ಅತ್ಯಧಿಕ ರನ್ ಸ್ಕೋರರ್ ಮತ್ತು ಅತ್ಯಧಿಕ ವಿಕೆಟ್ ಕಬಳಿಕೆದಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.