Select Your Language

Notifications

webdunia
webdunia
webdunia
webdunia

ಪಿವಿ ಸಿಂಧು ಬಗ್ಗೆ ಎಡವಟ್ಟು ಮಾಡಿಕೊಂಡ ತೆಲಂಗಾಣ ಉಪಮುಖ್ಯಮಂತ್ರಿ

ಪಿವಿ ಸಿಂಧು ಬಗ್ಗೆ ಎಡವಟ್ಟು ಮಾಡಿಕೊಂಡ ತೆಲಂಗಾಣ ಉಪಮುಖ್ಯಮಂತ್ರಿ
Hyderabad , ಭಾನುವಾರ, 19 ಫೆಬ್ರವರಿ 2017 (04:32 IST)
ಹೈದರಾಬಾದ್: ಪಿವಿ ಸಿಂಧು ಖ್ಯಾತ ಬ್ಯಾಡ್ಮಿಂಟನ್ ತಾರೆ ಎಂದು ನಮಗೆಲ್ಲಾ ಗೊತ್ತು. ಆದರೆ ತೆಲಂಗಾಣದ ಉಪ ಮುಖ್ಯಮಂತ್ರಿ ಮಹಮೂದ್ ಅಲಿ ಪಾಲಿಗೆ ಆಕೆ ವಾಲಿಬಾಲ್ ಆಟಗಾರ್ತಿಯಂತೆ!

 
ನಮ್ಮ ರಾಜಕಾರಣಿಗಳು ಕ್ರೀಡೆಯ ಬಗ್ಗೆ ಎಷ್ಟು ಆಸಕ್ತರಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಬ್ಯಾಡ್ಮಿಂಟನ್ ತಾರೆ ಸಿಂಧು ಅವರನ್ನು ವಾಲಿಬಾಲ್ ತಾರೆ ಎಂದು ಕರೆದು ಮಹಮೂದ್ ಅಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಅದೂ ಸಿಂಧು ಎದುರಲ್ಲೇ ಹೀಗೆ ಕರೆದು ತಮ್ಮ ಅಜ್ಞಾನ ತೋರಿಸಿಕೊಂಡರು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲೆ ಮನೆ ಮಾತಾಗಿರುವ ಸಿಂಧು ಅವರನ್ನು ಮ್ಯಾರಥಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಮೂದ್ ಅಲಿ ತಪ್ಪಾಗಿ ಸಂಬೋಧಿಸಿ ಮುಜುಗರಕ್ಕೀಡಾದರು. ವಿಪರ್ಯಾಸವೆಂದರೆ ಇದೇ ತೆಲಂಗಾಣ ಸರ್ಕಾರ ಸಿಂಧು ಒಲಿಂಪಿಕ್ಸ್ ಪದಕ ಗೆದ್ದಿದ್ದಕ್ಕೆ 5 ಕೋಟಿ ರೂ ಬಹುಮಾನ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಸ್ಪೂರ್ತಿಯಾದ ಈ ಪುಸ್ತಕ