Select Your Language

Notifications

webdunia
webdunia
webdunia
webdunia

ವಿವಾದವೇ ಬೇಡವೆಂದು ಹುದ್ದೆ ನಿರಾಕರಿಸಿದ ಸುರೇಶ್ ಕಲ್ಮಾಡಿ

ವಿವಾದವೇ ಬೇಡವೆಂದು ಹುದ್ದೆ ನಿರಾಕರಿಸಿದ ಸುರೇಶ್ ಕಲ್ಮಾಡಿ
NewDelhi , ಬುಧವಾರ, 28 ಡಿಸೆಂಬರ್ 2016 (17:56 IST)
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಮಿತಿಯ ಅಜೀವ ಸದಸ್ಯತ್ವ ಸ್ಥಾನವನ್ನು ಸ್ವೀಕರಿಸಲು ವಿವಾದಿತ ಮಾಜಿ ಕಾಮನ್ ವೆಲ್ತ್ ಗೇಮ್ಸ್ ಅಧ್ಯಕ್ಷ ಸುರೇಶ್ ಕಲ್ಮಾಡಿ ನಿರಾಕರಿಸಿದ್ದಾರೆ.


ಕಲ್ಮಾಡಿ ಭಾರತದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅವ್ಯವಹಾರ ನಡೆಸಿದ್ದ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು. ಈ ವಿವಾದಿತ ಮಾಜಿ ಅಧ್ಯಕ್ಷರಿಗೆ ಅಜೀವ ಸದಸ್ಯತ್ವ ನೀಡಿ ಒಲಿಂಪಿಕ್ಸ್ ಸಮಿತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೇಂದ್ರ ಕ್ರೀಡಾ ಸಚಿವರವರೆಗೆ ಈ ಪ್ರಕರಣ ತಲುಪಿತ್ತು.

ಈ ಹಿನ್ನಲೆಯಲ್ಲಿ ಯಾವುದೇ ವಿವಾದ ಮೈ ಮೇಲೆಳೆದುಕೊಳ್ಳುವುದು ಬೇಡವೆಂದು ಸ್ವತಃ ಕಲ್ಮಾಡಿ ತಮಗೆ ಈ ಹುದ್ದೆಯೇ ಬೇಡವೆಂದಿದ್ದಾರೆ.  ಈ ಹುದ್ದೆ ಸ್ವೀಕರಿಸುವುದು ಸಮಂಜಸವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕಲ್ಮಾಡಿ ಮತ್ತು ಇನ್ನೊಬ್ಬ ಅಭಯ್ ಚೌಟಾಲಾ ಕೂಡಾ ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವಿಷಯವಾಗಿ ಕೇಂದ್ರ ಕ್ರೀಡಾ ಸಚಿವಾಲಯ ಒಲಿಂಪಿಕ್ಸ್ ಸಮಿತಿಗೆ ಶೋಕಾಸ್ ನೋಟೀಸು ಜಾರಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್!