ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಜನವರಿ15 ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯದ ಟಿಕೆಗಳು ಸೋಲ್ಡ್ ಔಟ್ ಆಗಿವೆ. ಡಿಸೆಂಬರ್ 15 ರಿಂದ ಟಿಕೆಟ್ ಮಾರಾಟ ಆರಂಭವಾಗಿತ್ತು.
ಹಗಲು ರಾತ್ರಿ ಪಂದ್ಯದ ಆನ್ ಲೈನ್ ಮತ್ತು ಇತರ ಟಿಕೆಟ್ ಗಳು ಮಾರಾಟಗೊಂಡಿವೆ ಎಂದು ಎಂಸಿಎ ಪತ್ರಿಕಾ ಪ್ರಕಟಣೆ ತಿಳಿಸಿದೆ. 37, 406 ಮಂದಿಗೆ ಆಸನದ ವ್ಯವಸ್ಥೆಯಿರುವ ಮೈದಾನ ಈ ಪಂದ್ಯಕ್ಕೆ ಭರ್ತಿಯಾಗಲಿವೆ. 2013 ರ ನಂತರ ಇಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯ ನಡೆಯುತ್ತಿದೆ. ಹೀಗಾಗಿ ಪ್ರೇಕ್ಷಕರೂ ಆಸಕ್ತರಾಗಿದ್ದಾರೆ.
ಹೀಗಾಗಿ 15 ದಿನಗಳೊಳಗಾಗಿ ಟಿಕೆಟ್ ಗಳು ಖಾಲಿಯಾಗಿವೆ. ಕ್ರಿಸ್ ಮಸ್ ರಜೆಯ ನಂತರ ಭಾರತಕ್ಕೆ ಬರಲಿರುವ ಇಂಗ್ಲೆಂಡ್ ತಂಡ ಮೂರು ಏಕದಿನ ಪಂದ್ಯ ಮತ್ತು ಎರಡು ಟಿ-ಟ್ವೆಂಟಿ ಪಂದ್ಯಗಳನ್ನಾಡಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ