ಲಂಡನ್: ಟೀಂ ಇಂಡಿಯಾ ವಿರುದ್ಧ ಮಣ್ಣು ಮುಕ್ಕಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲರ್ ಗಳು ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿಯನ್ನು ಟೀಕಿಸಿದ್ದ ಜೇಮ್ಸ್ ಆಂಡರ್ಸನ್ ಪಾಲಿಗೆ ಸ್ಟುವರ್ಟ್ ಬ್ರಾಡ್ ಕೂಡಾ ಸೇರಿಕೊಂಡಿದ್ದಾರೆ.
ಸದ್ಯಕ್ಕೆ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಯಾರು ಎಂಬ ವಾದಕ್ಕೆ ದನಿಗೂಡಿಸಿರುವ ಬ್ರಾಡ್, ಟೀಂ ಇಂಡಿಯಾದ ವಿರಾಟ್ ಕೊಹ್ಲಿಗಿಂತ, ಆಸ್ಟ್ರೇಲಿಯಾದ ಸ್ಟುವರ್ಟ್ ಬ್ರಾಡ್, ಇಂಗ್ಲೆಂಡ್ ನ ಜೋ ರೂಟ್ ಬೆಸ್ಟ್ ಎಂದಿದ್ದಾರೆ.
ಇವರು ಮೂವರಲ್ಲಿ ಜೋ ರೂಟ್ ಎಲ್ಲರಿಗಿಂತ ಮೊದಲಿಗರಾಗುತ್ತಾರೆ. ಯಾಕೆಂದರೆ ರೂಟ್ ನಲ್ಲಿ ಎಂತಹ ಪ್ರತಿಭೆ ಇದೆ ಎನ್ನುವುದು ನನಗೆ ಗೊತ್ತು. ಆತ ಎಲ್ಲಾ ಪರಿಸ್ಥಿತಿಗಳಲ್ಲೂ ರನ್ ಗಳಿಸುತ್ತಾರೆ ಎಂದು ತಮ್ಮದೇ ದೇಶದ ಆಟಗಾರನನ್ನು ಬ್ರಾಡ್ ಹೊಗಳಿಕೊಂಡಿದ್ದಾರೆ.
ಆದರೆ ಕೊಹ್ಲಿ ಉತ್ತಮ ಬ್ಯಾಟ್ಸ್ ಮನ್ ಎನ್ನುವುದೇನೋ ನಿಜ. ಆದರೆ ಆಫ್ ಸ್ಟಂಪ್ ನಿಂದಾಚೆ ಹೋಗುವ ಬಾಲ್ ಗಳನ್ನು ಎದುರಿಸುವಾಗ ಅವರು ಕೊಂಚ ವೀಕ್ ಎಂದು ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ವೀಕ್ ಪಾಯಿಂಟ್ ಟೀಂ ಇಂಡಿಯಾ ವಿರುದ್ಧ ಆಡುವಾಗ ಬ್ರಾಡ್ ಗೆ ಯಾಕೆ ಹೊಳೆಯಲಿಲ್ಲ. ಅವರೇಕೆ ಕೊಹ್ಲಿಯನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ ಎಂದು ದೇವರೇ ಬಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ