Select Your Language

Notifications

webdunia
webdunia
webdunia
webdunia

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಮುಟ್ಟಿದ ಸೋನಿಯಾ

sonia
ಆಸ್ಟಾನಾ , ಶುಕ್ರವಾರ, 27 ಮೇ 2016 (19:51 IST)
ಸೋನಿಯಾ ಲಾದರ್(57 ಕೆಜಿ) ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಚಿನ್ನದ ಪದಕದ ಬರವನ್ನು ನೀಗಲು ಕೇವಲ ಒಂದು ಗೆಲುವು ಬೇಕಾಗಿದೆ. ಸೆಮಿಫೈನಲ್‌ನಲ್ಲಿ ಅವರು ಕಜಕಸ್ಥಾನದ ಐಜಾನ್ ಕೋಜಬೇಕೋವಾ ಅವರ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿದ್ದಾರೆ.

24 ವರ್ಷದ ಸೋನಿಯಾ 2012ರ ಏಷ್ಯಾ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತೆಯಾಗಿದ್ದು, ಕೊಜೊಬೆಕೋವಾ ಅವರನ್ನು 3-0 ಸೆಟ್‌ಗಳಿಂದ ಸೋಲಿಸಿದರು. ಫೈನಲ್‌ನಲ್ಲಿ ಅವರು ಇಟಲಿಯ ಅಲೇಸಿಯಾ ಮೆಸಿಯಾನೊ ಅವರನ್ನು ಎದುರಿಸಲಿದ್ದಾರೆ. 
 
ಭಾರತ ಈ ವಿಭಾಗದಲ್ಲಿ 2010ರಿಂದ ಚಿನ್ನದ ಪದಕ ಗೆದ್ದಿರಲಿಲ್ಲ. 2010ರಲ್ಲಿ ಮೇರಿ ಕಾಮ್ 48 ಕೆಜಿ ವಿಭಾಗದಲ್ಲಿ ಅಗ್ರಸ್ಥಾನ ತಲುಪಿ ಐದನೇ ಬಾರಿಗೆ ವಿಶ್ವಕಪ್ ವಿಜೇತರಾಗಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಯೊನೆಲ್ ಮೆಸ್ಸಿ, ಜೋಕೋವಿಕ್ ಮೀರಿದ ಕೊಹ್ಲಿ