ಭಾರತದ ಪಿ.ವಿ.ಸಿಂಧು ಮತ್ತು ಸ್ಪೇನ್ ಆಟಗಾರ್ತಿ ಕರೋಲಿನಾ ಮರೀನ್ ನಡುವೆ ನಡೆದ ರಿಯೋ ಓಲಂಪಿಕ್ಸ್ನ ಬ್ಯಾಡ್ಮಿಂಟನ್ ಫೈನಲ್ ಪಂದ್ಯವನ್ನು ಟಿವಿ ಪರದೆ ಮೇಲೆ ವೀಕ್ಷಿಸಿದವರೆಷ್ಟು ಗೊತ್ತೇ?
ಬಂಗಾರಕ್ಕಾಗಿ ಡಿ ಜನೈರೋದಲ್ಲಿ ನಡೆದ ಈ ಕದನವನ್ನು ವಿಶ್ವದಾದ್ಯಂತ ಒಟ್ಟು 17 ಮಿಲಿಯನ್( 17.2 ದಶಲಕ್ಷ) ಜನರು ವೀಕ್ಷಿಸಿದ್ದಾರೆ. ಅದು ಆ ದಿನ ಅತಿ ಹೆಚ್ಚು ವೀಕ್ಷಿತ ಕಾರ್ಯಕ್ರಮ ಅದಾಗಿತ್ತು ಎಂದು ಈ ಪಂದ್ಯವನ್ನು ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.
ಜಿದ್ದಾಜಿದ್ದಿನ ಈ ಕಾಳಗದಲ್ಲಿ ಸೋತನ್ನು ಕಂಡಿದ್ದ ಪಿ.ವಿ. ಸಿಂಧು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಈ ಬಾರಿಯ ಓಲಂಪಿಕ್ಸ್ನ್ನು ಲೈವ್ ಆಗಿ ಭಾರತದಲ್ಲಿ ವೀಕ್ಷಿಸಿದವರ ಸಂಖ್ಯೆ 10ಮಿಲಿಯನ್ ಎಂದು ಸ್ಟಾರ್ ತಿಳಿಸಿದೆ.