Select Your Language

Notifications

webdunia
webdunia
webdunia
webdunia

ಟಿ 20ಯಲ್ಲಿ ಅಗ್ರ ಶ್ರೇಯಾಂಕ ಕಾಯ್ದುಕೊಂಡ ವಿರಾಟ್ ಕೊಹ್ಲಿ

Virat Kohli
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (14:22 IST)
ಐಸಿಸಿ ಟಿ20 ಅಂತರಾಷ್ಟ್ರೀಯ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜಸ್ಪಿತ್ ಭೂಮ್ರಾ ಮತ್ತು ಆರ್. ಅಶ್ವಿನ್ 3 ಮತ್ತು ನಾಲ್ಕನೆಯ ಸ್ಥಾನದಲ್ಲಿದ್ದಾರೆ. ಸೆಮ್ಯುಯೆಲ್ ಬಡ್ರಿ, ಇಮ್ರಾನ್ ತಹೀರ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.  
 
ಬ್ಯಾಟಿಂಗ್ ವಿಭಾಗದಲ್ಲಿ ಟಾಪ್ 5 ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅರೋನ್ ಫಿಂಚ್, ಮಾರ್ಟಿನ್ ಗಪ್ಟಿಲ್, ಫಾಪ್ ಡು ಪ್ಲೆಸಿಸ್ ಮತ್ತು ಜೋ ರೂಟ್ ಕ್ರಮವಾಗಿ ಕೊಹ್ಲಿ ನಂತರದ ಸ್ಥಾನಗಳಲ್ಲಿ ಮುಂದುವರೆದಿದ್ದಾರೆ. 
 
ತಂಡದ ಮಟ್ಟಿಗೆ ಹೇಳುವುದಾದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಸೋತರೂ ಭಾರತ ಎರಡನೆಯ ಸ್ಥಾನದಲ್ಲಿ ಮುಂದುವರೆದಿದೆ. ನ್ಯೂಜಿಲ್ಯಾಂಡ್ ಅಗ್ರ ಕ್ರಮಾಂಕದಲ್ಲಿದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ರಿಯೋ ಓಲಂಪಿಕ್ ಸ್ಪೂರ್ತಿ: ಶೂಟರ್ ಮಗಳಿಗೆ 5 ಲಕ್ಷದ ರೈಫಲ್ ಕೊಡಿಸಿದ ರಿಕ್ಷಾ ಚಾಲಕ