ರಿಯೋ ಓಲಂಪಿಕ್ಸ್ನಲ್ಲಿ ದೇಶದ ಮಹಿಳಾ ಕ್ರೀಡಾಪಟುಗಳ ಭರ್ಜರಿ ಪ್ರದರ್ಶನದಿಂದ ಪ್ರಭಾವಿತನಾಗಿರುವ ಬಡ ತಂದೆಯೊಬ್ಬ ಶೂಟಿಂಗ್ನಲ್ಲಿ ರಾಷ್ಟ್ರಮಟ್ಟದ ಪ್ರತಿಭೆಯಾಗಿರುವ ಮಗಳಿಗೆ 5 ಲಕ್ಷ ರೂಪಾಯಿ ಮೌಲ್ಯದ ರೈಫಲ್ ಕೊಡಿಸಿದ್ದಾನೆ.
ಹೌದು, ಅಹಮದಾಬಾದ್ ನಿವಾಸಿ ಮನಿಲಾಲ್ ಗೋಹಿಲ್ ತನ್ನ ಏಕೈಕ ಪುತ್ರಿಯ ಕನಸನ್ನು ಈಡೇರಿಸುವುದಕ್ಕಾಗಿ, ಆಕೆಯ ಮದುವೆಗಾಗಿ ಕೂಡಿಟ್ಟ ಹಣವನ್ನು ರೈಫಲ್ ಕೊಡಿಸಲು ವಿನಿಯೋಗಿಸಿದ್ದಾನೆ.
ಅಪ್ಪ ಮತ್ತು ಮಗಳು ರೈಫಲ್ ಹೊಂದುವ ಪರವಾನಿಗೆ ಪಡೆಯಲು ಸ್ಥಳೀಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಹೋದಾಗ, ಅಲ್ಲಿನ ಅಧಿಕಾರಿಗಳು ದಂಗು ಬಡಿದು ಹೋದರು. ಬಡ ರಿಕ್ಷಾ ಚಾಲಕ ತನ್ನ ಮಗಳಿಗೆ ಅಷ್ಟೊಂದು ದುಬಾರಿ ರೈಫಲ್ ಕೊಡಿಸುತ್ತಿರುವುದನ್ನು ಅವರಿಂದ ನಂಬಲಾಗಲಿಲ್ಲ. ಮನಿಲಾಲ್ನನ್ನು ತುಂಬು ಮನಸ್ಸಿಂದ ಹೊಗಳಿದ ಅವರು ಅಗತ್ಯ ಪರವಾನಿಗೆಯನ್ನು ಪಡೆಯಲು ಸಹಾಯ ಮಾಡಿದರು.
ಮನಿಲಾಲ್ನ 27 ವರ್ಷದ ಮಗಳು ಮಿತ್ತಲ್ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಆಗಿದ್ದು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ .