Select Your Language

Notifications

webdunia
webdunia
webdunia
webdunia

ಓದಿನಲ್ಲಿ ಜಾಣನಾಗಿರದಿದ್ದುದೇ ನನ್ನ ಅದೃಷ್ಟ: ಗೋಪಿಚಂದ್

ಓದಿನಲ್ಲಿ ಜಾಣನಾಗಿರದಿದ್ದುದೇ ನನ್ನ ಅದೃಷ್ಟ: ಗೋಪಿಚಂದ್
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (11:47 IST)
ತಾವು ಓದಿನಲ್ಲಿ ಬುದ್ಧವಂತನಾಗಿರದಿದ್ದುದೇ ನನ್ನ ದೊಡ್ಡ ಅದೃಷ್ಟ ಎಂದು ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿದ್ದಾರೆ.

ಕ್ರೀಡೆ ಬದ್ಧತೆ ಮತ್ತು ತ್ಯಾಗವನ್ನು ಅಪೇಕ್ಷಿಸುತ್ತದೆ ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಬಗ್ಗೆ ಚರ್ಚಿಸುತ್ತಿದ್ದ ಅವರು, ನಾನು ಮತ್ತು ಅಣ್ಣ ಇಬ್ಬರು ಕ್ರೀಡೆಯಲ್ಲಿ ಮುಂದಿದ್ದೆವು. ಆತ ಓದಿನಲ್ಲೂ ಜಾಣನಾಗಿದ್ದ. ಆದರೆ ನನಗೆ ಓದು ತಲೆಗೆ ಹತ್ತುತ್ತಿರಲಿಲ್ಲ. ಇದೇ ನನಗೆ ಅದೃಷ್ಟವಾಯಿತು. ಐಐಟಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇ ನಾನು ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
 
ಅಣ್ಣ ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದ. ಐಐಟಿ ಪರೀಕ್ಷೆ ಬರೆದಿದ್ದ ಆದ ತೇರ್ಗಡೆಯಾದ. ಹೀಗಾಗಿ ಐಐಟಿ ಸೇರಿದ ಆತ ಆಟವನ್ನು ನಿಲ್ಲಿಸಿದ. ನಾನು ಕೂಡ ಎಂಜಿನಿಯರಿಂಗ್ ಪರೀಕ್ಷೆ ಬರೆದು ಫೇಲಾದೆ. ಹೀಗಾಗಿ ಕ್ರೀಡೆಯಲ್ಲಿ ಮುಂದುವರೆದೆ. ಈಗ ನಾನು ಎಲ್ಲಿ ನಿಂತಿದ್ದೇನೆ ನೋಡಿ. ನನ್ನ ಮಟ್ಟಿಗೆ ಹೇಳುವುದಾದರೆ ನಮಗೆ ಬದ್ಧತೆ ಇರಬೇಕು ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಇರಬೇಕು ಎಂದು ನಗುತ್ತಾರೆ 42ರ ಗೋಪಿಚಂದ್. 
 
ಆಲ್ ಇಂಗ್ಲೆಂಡ್ ಟೂರ್ನಿ ಗೆದ್ದಿರುವ ಎರಡೇ ಕ್ರೀಡಾಪಟುಗಳಲ್ಲಿ ಗೋಪಿಚಂದ್ ಕೂಡ ಒಬ್ಬರು. 2001ರಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡದ್ದ ಅವರು ಕೆಲ ದಿನಗಳಲ್ಲಿಯೇ ನಿವೃತ್ತಿ ಪಡೆದು ಸ್ವಂತ ಅಕಾಡೆಮಿಯನ್ನು ಪ್ರಾರಂಭಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಧು, ಸಾಕ್ಷಿಗೆ ದೆಹಲಿ ಸರ್ಕಾರದಿಂದ ಸನ್ಮಾನ