ಸೈನಾ ನೆಹ್ವಾಲ್ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿದ ನಟ ಸಿದ್ಧಾರ್ಥ್

Webdunia
ಸೋಮವಾರ, 10 ಜನವರಿ 2022 (16:43 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಬಿಜೆಪಿಯ ಸೈನಾ ನೆಹ್ವಾಲ್ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿರುವ ಟಾಲಿವುಡ್ ನಟ ಸಿದ್ಧಾರ್ಥ್ ತೀವ್ರ ಟೀಕೆಗೊಳಗಾಗಿದ್ದಾರೆ. ಸ್ವತಃ ಸೈನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪಂಜಾಬ್ ನಲ್ಲಿ ಪಿಎಂ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಸೈನಾ ವಿಷಾಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಯಾವ ದೇಶದಲ್ಲಿ ಪ್ರಧಾನಿಗೇ ರಕ್ಷಣೆಯಿಲ್ಲವೋ ಅಂತಹ ಯಾವ ದೇಶವೂ ಸುರಕ್ಷಿತ ಎನ್ನಲು ಸಾಧ‍್ಯವಿಲ್ಲ ಎಂದು ಸೈನಾ ಟ್ವೀಟ್ ಮಾಡಿದ್ದರು.

 
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ಧಾರ್ಥ್, ವಿಶ್ವದ ಕಾಕ್ ಚಾಂಪಿಯನ್ ಅವರೇ., ಥ್ಯಾಂಕ್ ಗಾಡ್, ನಮ್ಮ ದೇಶವನ್ನು ರಕ್ಷಿಸುವವರಿದ್ದಾರೆ. ಶೇಮ್ ಆನ್ ಯೂ ರಿಹನ್ನಾ’ ಎಂದು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಭಾರೀ ಟೀಕೆಗೊಳಗಾಗಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸೈನಾ, ‘ಒಬ್ಬ ನಟನಾಗಿ ಸಿದ್ಧಾರ್ಥ್ ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಆದರೆ ಈಗ ಅವರು ಇಂತಹ ಹೇಳಿಕೆ ಯಾಕೆ ಕೊಟ್ಟರು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ. ಇನ್ನು ತಮ್ಮ ಟ್ವೀಟ್ ವಿವಾದವಾಗುತ್ತಿದ್ದಂತೇ ಸ್ಪಷ್ಟನೆ ನೀಡಿರುವ ಸಿದ್ಧಾರ್ಥ್ ‘ಇದನ್ನು ಬೇರೆ ರೀತಿಯಲ್ಲಿ ಓದುವುದು ಬೇಡ. ಯಾರಿಗೂ ಅಗೌರವಯುತವಾಗಿ ಹೇಳಿಲ್ಲ ಎಂದಿದ್ದಾರೆ. ಆದರೆ ನಟನ ಟ್ವೀಟ್ ಖಂಡಿಸಿರುವ ಮಹಿಳಾ ಆಯೋಗ ಸಿದ್ಧಾರ್ಥ್ ಖಾತೆಯನ್ನು ಬ್ಲಾಕ್ ಮಾಡುವಂತೆ ಆಗ್ರಹಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments