Select Your Language

Notifications

webdunia
webdunia
webdunia
webdunia

ಶೂಟರ್ ಬಿಂದ್ರಾಗೆ ರಿಯೋ ಒಲಿಂಪಿಕ್ಸ್‌ನಲ್ಲಿ ತಂಡ ಮುನ್ನಡೆಸುವ ಗೌರವ

ಶೂಟರ್ ಬಿಂದ್ರಾಗೆ ರಿಯೋ ಒಲಿಂಪಿಕ್ಸ್‌ನಲ್ಲಿ ತಂಡ ಮುನ್ನಡೆಸುವ ಗೌರವ
ನವದೆಹಲಿ: , ಶನಿವಾರ, 11 ಜೂನ್ 2016 (20:13 IST)
ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸುವ ಗೌರವಕ್ಕೆ ಶೂಟರ್ ಅಭಿನವ್ ಭಿಂದ್ರಾ ಪಾತ್ರರಾಗಿದ್ದಾರೆ. ಅಭಿನವ್ ಭಿಂದ್ರಾ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.  ಪಥಸಂಚಲನದಲ್ಲಿ ಭಾರತದ ಆಟಗಾರರ ತಂಡವನ್ನು ಮುನ್ನಡೆಸಲು ಭಿಂದ್ರಾ ಆಯ್ಕೆಯಾಗಿದ್ದು, ರಿಯೊ ಒಲಿಂಪಿಕ್ಸ್ ಅವರಿಗೆ ಕೊನೆಯ ಒಲಿಂಪಿಕ್ಸ್ ಆಗುವ ಸಾಧ್ಯತೆಯಿದೆ. 
 
33ರ ಹರೆಯದ ಅಭಿನವ್ ಬಿಂದ್ರಾ ಅವರು ಬೀಜಿಂಗ್ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಬಿಂದ್ರಾ ಅವರನ್ನು ಆಯ್ಕೆ ಮಾಡಿ ಐಒಎ ಪ್ರಕಟಿಸಿದೆ.

ಭಿಂದ್ರಾ ಅವರು ಒಟ್ಟು ಏಳು ಕಾಮನ್‌ವೆಲ್ತ್ ಪದಕಗಳು ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಗೆದ್ದಿದ್ದಾರೆ.  ಆಗಸ್ಟ್ 8ರಂದು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಿಂದ್ರಾ ಅವರು ತಮ್ಮ ವೃತ್ತಿಜೀವನಕ್ಕೆ ತೆರೆಬೀಳಲಿದೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಮಿಂಚಿನ ಶತಕ: ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ