ಕರಾಚಿ: ಭಾರತ-ಪಾಕ್ ಜೋಡಿ ಸಾನಿಯಾ ಮಿರ್ಜಾ-ಶೊಯೇಬ್ ಮಲಿಕ್ ಜೋಡಿ ಈಗ ಸಂಭ್ರಮಾಚರಣೆಯ ಮೂಡ್ ನಲ್ಲಿದ್ದಾರೆ. ಅದಕ್ಕೊಂದು ಕಾರಣವೂ ಇದೆ.
ಸಾನಿಯಾ ಏನಾದ್ರೂ… ಸ್ವಲ್ಪ ತಡೀರಿ. ಅಷ್ಟೆಲ್ಲಾ ಯೋಚನೆ ಮಾಡಬೇಡಿ. ಇವರಿಬ್ಬರೂ ಮದುವೆಯಾಗಿ ಏಳು ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಆ ಖುಷಿಯನ್ನು ಹೆಚ್ಚು ಮಾಡುವಂತೆ ಶೊಯೇಬ್ ಶತಕ ಸಿಡಿಸಿ ಪಾಕ್ ತಂಡಕ್ಕೆ ವೆಸ್ಟ್ ಇಂಡೀಸ್ ಎದುರು ಸರಣಿ ಗೆಲುವು ಕೊಡಿಸಿದರು.
ಇದೀಗ ಶೊಯೇಬ್ ತಮ್ಮ ಟ್ವಿಟರ್ ಪುಟದಲ್ಲಿ ಮರಳಿ ಫಾರ್ಮ್ ಪಡೆಯಲು ಉತ್ತೇಜನ ನೀಡಿದ ಪತ್ನಿಗೆ ಧನ್ಯವಾದ ತಿಳಿಸಿದ್ದಲ್ಲದೆ, ವಿವಾಹ ವಾರ್ಷಿಕೋತ್ಸವದ ಶುಭಾಷಯವನ್ನೂ ಕೋರಿದ್ದಾರೆ. ಇದಕ್ಕೆ ಸಾನಿಯಾ ಕೂಡಾ ಪ್ರತಿಕ್ರಿಯಿಸಿದ್ದು, ಮರಳಿ ಶುಭ ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ