Select Your Language

Notifications

webdunia
webdunia
webdunia
webdunia

ಯೋಧರ ಮೇಲೆ ಬೀಳುವ ಒಂದೊಂದು ಏಟಿಗೆ 100 ಜಿಹಾದಿಗಳ ಹೆಣ ಬೀಳಬೇಕು: ಸೆಹ್ವಾಗ್, ಗಂಭೀರ್ ಕಿಡಿ

ಯೋಧರ ಮೇಲೆ ಬೀಳುವ ಒಂದೊಂದು ಏಟಿಗೆ 100 ಜಿಹಾದಿಗಳ ಹೆಣ ಬೀಳಬೇಕು: ಸೆಹ್ವಾಗ್, ಗಂಭೀರ್ ಕಿಡಿ
ನವದೆಹಲಿ , ಗುರುವಾರ, 13 ಏಪ್ರಿಲ್ 2017 (16:55 IST)
ಏಪ್ರಿಲ್  9ರಂದು ಶ್ರೀನಗರದ ಉಪಚುನಾವಣೆ ವೇಳೆ ಸಿಆರ್`ಪಿಎಫ್ ಯೋಧನೊಬ್ಬನಿಗೆ ಪ್ರತಿಭಟನಾಕಾರರಲ್ಲೊಬ್ಬ ಕಾಲಿನಿಂದ ಒದ್ದ ಬಗ್ಗೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಟ್ವಿಟ್ಟರ್`ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೆ ಆಜಾದಿ ಬೇಕೋ ಅವರು ದೇಶ ಬಿಟ್ಟು ಹೋಗಿ ಎಂದು ಕಿಡಿ ಕಾರಿದ್ದಾರೆ.

ಯೋಧರ ಮೇಲೆ ಬೀಳುವ ಒಂದೊಂದು ಏಟಿಗೆ 100 ಜಿಹಾದಿಗಳ ಹೆಣ ಬೀಳಬೇಕು ಎಂದು ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ. ಗಂಭೀರ್ ಟ್ವೀಟ್`ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ಯೋಧರ ಮೆಲಿನ ಹಲ್ಲೆಯನ್ನ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ಯೋಧನನ್ನ ಕಾಲಿನಿಂದ ಒದ್ದ ವಿಡಿಯೋ ಆನ್`ಲೈನ್`ನಲ್ಲಿ ವೈರಲ್ ಆಗುತ್ತಿದ್ದಂತೆ ಮಾಜಿ ಕ್ರಿಕೆಟಿಗರು ಟ್ವಿಟ್ ಮಾಡಿದ್ದಾರೆ.
ಏಪ್ರಿಲ್ 9ರಂದು ನಡೆದ ಶ್ರೀನಗರ ುಪಚುನಾವಣೆ ವೇಳೆ ಭದ್ರತ಻ ಪಡೆ ಮತ್ತು ಚುನಾವಣೆ ತಡೆಯಲು ಯತ್ನಿಸಿದ ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ 8 ಮಂದಿ ಸಾವನ್ನಪ್ಪಿದ್ದರು. 16 ಮತಯಂತ್ರಗಳು ಕಳುವಾಗಿದ್ದರೆ 33 ಮತಯಂತ್ರಗಳನ್ನ ಡ್ಯಾಮೇಜ್ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮೇಲ್ ಮೂಲಕವೇ ಬ್ಯಾಟಿಂಗ್ ಟಿಪ್ಸ್ ಕೊಟ್ಟ ರಾಹುಲ್ ದ್ರಾವಿಡ್