ನವದೆಹಲಿ: ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿ ಅದೆಷ್ಟು ಕ್ರಿಕೆಟಿಗರಿಗೆ ಉಪಕಾರ ಮಾಡಿದ್ದಾರೋ. ಆದರೆ ಇಂಗ್ಲೆಂಡ್ ನ ಸ್ಪೋಟಕ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಗೆ ದ್ರಾವಿಡ್ ಸಲಹೆ ಕೊಟ್ಟ ರೀತಿ ಮಾತ್ರ ನಿಜಕ್ಕೂ ವಿಶೇಷವಾಗಿತ್ತು.
ಎಲ್ಲರಿಗೂ ಮೈದಾನದಲ್ಲಿ ಹೇಳಿಕೊಡುವ ದ್ರಾವಿಡ್ ಪೀಟರ್ಸನ್ ಗೆ ಈ ಮೂಲಕ ಬ್ಯಾಟಿಂಗ್ ನಲ್ಲಿ ಹುಳುಕೇನಿದೆ, ಅದನ್ನು ಹೇಗೆ ಸರಿಪಡಿಸಬಹುದು ಎಂದು ಸಲಹೆ ಕೊಟ್ಟರಂತೆ. ಒಂದು ಕಾಲದಲ್ಲಿ ಇವರಿಬ್ಬರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹವರ್ತಿಗಳಾಗಿದ್ದವರು.
ಹೀಗೇ ಒಮ್ಮೆ ದ್ರಾವಿಡ್ ಬಳಿ ಬ್ಯಾಟಿಂಗ್ ಇಂಪ್ರೂವ್ ಮಾಡಲು ಸಲಹೆ ಕೇಳಿದ್ದಕ್ಕೆ ದ್ರಾವಿಡ್ ಈ ಮೇಲ್ ಮೂಲಕ ಉತ್ತರಿಸಿದರು. ಅದು ನನ್ನ ಬ್ಯಾಟಿಂಗ್ ನಲ್ಲಿ ಗಮನಾರ್ಹ ಬದಲಾವಣೆ ತಂದಿತು ಎಂದು ಸಂದರ್ಶನವೊಂದರಲ್ಲಿ ಪೀಟರ್ಸನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ