Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಖುದ್ದು ಹಾಜರಿದ್ದ ಸಾನಿಯಾ ಮಿರ್ಜಾ!

ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಖುದ್ದು ಹಾಜರಿದ್ದ ಸಾನಿಯಾ ಮಿರ್ಜಾ!
London , ಮಂಗಳವಾರ, 13 ಜೂನ್ 2017 (09:51 IST)
ಲಂಡನ್: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಖುದ್ದು ಹಾಜರಿದ್ದು ವೀಕ್ಷಿಸಿದ್ದಾರೆ.

 
ಶೊಯೇಬ್ ಗೆ ಇದು 250 ನೇ ಏಕದಿನ ಪಂದ್ಯವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆಯೇ ಸಂದರ್ಶನವೊಂದರಲ್ಲಿ ಸಾನಿಯಾ ಪತಿಗೆ ಹೊಗಳಿಕೆ ನೀಡಿದ್ದರು. ಅಲ್ಲದೆ ಆತನ ಬದ್ಧತೆಯಿಂದಾಗಿ ಇಷ್ಟು ಪಂದ್ಯಗಳನ್ನು ಆಡಲು ಸಾಧ್ಯವಾಯಿತು ಎಂದಿದ್ದರು.

ತದನಂತರ ಸದ್ಯಕ್ಕೆ ಬರ್ಮಿಂಗ್ ಹ್ಯಾಂ ಓಪನ್ ಟೆನಿಸ್ ಟೂರ್ನಿಗಾಗಿ ಇಂಗ್ಲೆಂಡ್ ನಲ್ಲಿರುವ ಸಾನಿಯಾ ಪತಿ ಶೊಯೇಬ್ ಆಟವನ್ನು ನೋಡಲು ಖುದ್ದಾಗಿ ಮೈದಾನಕ್ಕೆ ಬಂದು ಚಿಯರ್ ಮಾಡಿದರು. ಈ ಸಂದರ್ಭದಲ್ಲಿ ಸಾನಿಯಾಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರೂ ಸಾಥ್ ನೀಡಿದ್ದರು. ಆದರೆ ಶೊಯೇಬ್ ಈ ಪಂದ್ಯದಲ್ಲಿ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಬೌಲಿಂಗ್ ಕೂಡಾ ಮಾಡಿರಲಿಲ್ಲ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕದನವಾಗುತ್ತಾ..?