Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕದನವಾಗುತ್ತಾ..?

ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕದನವಾಗುತ್ತಾ..?
, ಮಂಗಳವಾರ, 13 ಜೂನ್ 2017 (07:10 IST)
ಚಾಂಪಿಯನ್ಸ್ ಟ್ರೋಫಿಯಲ್ಲಿ ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ಒಮ್ಮೆ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಭಾರತ 127 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಈ ಮಧ್ಯೆ,  ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕದನವಾಗುತ್ತಾ..? ಹೌದು ಎನ್ನುವಂತಿದೆ ಸದ್ಯದ ಪರಿಸ್ಥಿತಿ.
 

ಭಾರತ ಮತ್ತು ಪಾಕಿಸ್ತಾನ ತಂಡಗೆರಡೂ ಸೆಮಿಫೈನಲ್ ತಲುಪಿವೆ. ಭಾರತ, ಬಾಂಗ್ಲಾದೇಶ ವಿರುದ್ಧ ಸೆಣೆಸಿದರೆ, ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ. ನಾಳೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಎರಡೂ ತಂಡಗಳು ಬಲಿಷ್ಠವಾಗಿದೆ. ಇಂಗ್ಲೆಂಡ್ ಮೂರೂ ಪಂದ್ಯ ಗೆದ್ದು ಸೆಮಿಫೈನಲ್ ತಲುಪಿದ್ದರೆ, ಪಾಕಿಸ್ತಾನ ಭಾರತ ವಿರುದ್ಧ ಸೋತರೂ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳನ್ನ ಮಣಿಸಿ ಸೆಮಿಫೈನಲ್`ಗೆ ಬಂದಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೂ ಅಚ್ಚರಿ ಇಲ್ಲ.

ಅತ್ತ, 2ನೇ ಸೆಮಿಫೈನಲ್`ನಲ್ಲಿ ಬಾಂಗ್ಲಾ ವಿರುದ್ಧ ಸೆಣೆಸುತ್ತಿರುವ ಭಾರತ ಗೆಲ್ಲುವ ಫೇವರೀಟ್ ತಂಡವಾಗಿದೆ. ಅಲ್ಲಿ ಪಾಕಿಸ್ತಾನ ಗೆದ್ದು ಇಲ್ಲಿ ಭಾರತ ಗೆದ್ದರೆ ಫೈನಲ್`ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕದನ ನಡೆಯಲಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶರ್ಮಾ ಎದುರು ಕಣ್ಣೀರು ಹಾಕಿದ್ದ ವಿರಾಟ್ ಕೊಹ್ಲಿ!