Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ಎದುರು ಕಣ್ಣೀರು ಹಾಕಿದ್ದ ವಿರಾಟ್ ಕೊಹ್ಲಿ!

ಅನುಷ್ಕಾ ಶರ್ಮಾ ಎದುರು ಕಣ್ಣೀರು ಹಾಕಿದ್ದ ವಿರಾಟ್ ಕೊಹ್ಲಿ!
London , ಮಂಗಳವಾರ, 13 ಜೂನ್ 2017 (06:38 IST)
ಲಂಡನ್: ವಿರಾಟ್ ಕೊಹ್ಲಿ ಜೀವನದಲ್ಲಿ ಅನುಷ್ಕಾ ಶರ್ಮಾ ಎಷ್ಟು ಮುಖ್ಯ ಎನ್ನುವುದನ್ನು ಅವರು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಅನುಷ್ಕಾ ತಮ್ಮ ಸುಖ ದುಃಖಗಳಲ್ಲಿ ಭಾಗಿಯಾದ ಸಂದರ್ಭವೊಂದನ್ನು ಅವರು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

 
ಮೊಹಾಲಿಯಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡುವುದಕ್ಕಾಗಿ ಹೋಟೆಲ್ ನಲ್ಲಿ ಬೀಡು ಬಿಟ್ಟಿದ್ದಾಗ ಅನುಷ್ಕಾ ಕೂಡಾ ಅವರ ಜತೆಗಿದ್ದರಂತೆ. ಅದೇ ಸಂದರ್ಭದಲ್ಲಿ ಧೋನಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದರು. ಮತ್ತು ನಾಯಕತ್ವದ ಹೊಣೆ ಕೊಹ್ಲಿ ಹೆಗಲಿಗೇರಿತ್ತು.

ಆವತ್ತು ಫೋನ್ ಮೂಲಕ ನೀವು ಮುಂದಿನ ನಾಯಕ ಎಂದಾಗ ಒಂದು ಕ್ಷಣ ಕೊಹ್ಲಿಗೆ ಏನನ್ನಬೇಕೋ ಗೊತ್ತಾಗಲಿಲ್ಲವಂತೆ. ಬಾಲ್ಯದಿಂದ ಇಲ್ಲಿಯವರೆಗೆ ತಾವು ನಡೆದು ಬಂದ ಹಾದಿ ನೆನಪಾಗಿ ಅಳುವೇ ಬಂತಂತೆ.

ಆಗ ಪಕ್ಕದಲ್ಲಿದ್ದ ಅನುಷ್ಕಾ ಬಳಿ ದುಃಖಕ್ಕೋ ಖುಷಿಗೋ ಕಣ್ಣೀರು ಹಾಕಿದ್ದರಂತೆ ಕೊಹ್ಲಿ. ಅಂತಹ ವಿಶೇಷ ಸಂದರ್ಭದಲ್ಲಿ ಆಕೆ ತನ್ನ ಬಳಿಯಿದ್ದಿದ್ದು, ಆಕೆಯ ಜತೆ ಆ ಕ್ಷಣವನ್ನು ಹಂಚಿಕೊಳ್ಳಲು ಸಾಧ್ಯವಾಗಿದ್ದು ಮರೆಯಲಾರೆ ಎಂದಿದ್ದಾರೆ ಕೊಹ್ಲಿ. ವಿಶೇಷವೆಂದರೆ, ಕೊಹ್ಲಿ ಏಕದಿನ ತಂಡಕ್ಕೆ ನಾಯಕನಾಗಿ ಘೋಷಣೆಯಾಗುವಾಗಲೂ ಅನುಷ್ಕಾ ಅವರ ಬಳಿಯಿದ್ದರಂತೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಆಗಿ ಮುಂದುವರಿಯಲು ಅನಿಲ್ ಕುಂಬ್ಳೆಗೆ ಗ್ರೀನ್ ಸಿಗ್ನಲ್