Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾಗೆ ಇನ್ನೊಮ್ಮೆ ಮದುವೆಯಾಗುವ ಆಸೆ! ವರ ಯಾರು ಗೊತ್ತಾ?

ಸಾನಿಯಾ ಮಿರ್ಜಾಗೆ ಇನ್ನೊಮ್ಮೆ ಮದುವೆಯಾಗುವ ಆಸೆ! ವರ ಯಾರು ಗೊತ್ತಾ?
Mumbai , ಸೋಮವಾರ, 6 ಫೆಬ್ರವರಿ 2017 (10:51 IST)
ಮುಂಬೈ: ಟೆನಿಸ್ ಬೆಡಗಿ ಈಗ ಪಾಕಿಸ್ತಾನದ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯಾಗಿರುವ ಸಾನಿಯಾ ಮಿರ್ಜಾ ಹೆಸರು ಮದುವೆಗೂ ಮೊದಲು ಹಲವು ಖ್ಯಾತ ನಾಮರ ಜತೆ ಥಳುಕು ಹಾಕಿಕೊಂಡಿತ್ತು. ಆದರೆ ಮದುವೆಯಾದ ಮೇಲೂ ಅವರು ತನಗೆ ರಣಬೀರ್ ಕಪೂರ್ ಮೇಲೆ ಆಸೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

 
ಇದೆಲ್ಲಾ ಆಗಿದ್ದು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ. ತಮ್ಮ ಗೆಳತಿ ನಿರ್ದೇಶಕಿ ಪರ್ಹಾನ್ ಅಖ್ತರ್ ಜತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಸಾನಿಯಾಗೆ ಕರಣ್ ಕೆಲವು  ಗೂಗ್ಲಿ ಎಸೆದಿದ್ದರು. ಇದಕ್ಕೆ ಸಾನಿಯಾ ಕೂಡಾ ಅಷ್ಟೇ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ.

ಹಿಂದೊಮ್ಮೆ ನಿಮ್ಮ ಮತ್ತು ಶಾಹಿದ್ ಕಪೂರ್ ಹೆಸರು ಜತೆಯಾಗಿ ಕೇಳಿಬರುತ್ತಿತ್ತಲ್ಲ? ನಿಮ್ಮ ನಡುವೆ ಏನಿತ್ತು ಎಂದು ಸಾನಿಯಾಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿ ಸಾನಿಯಾ ‘ಅಂತಹದ್ದೊಂದು ಯಾವುದೇ ಘಟನೆ ನನಗೆ ನೆನಪೇ ಇಲ್ಲ. ನಾನು ಸಾಕಷ್ಟು ಪ್ರಯಾಣ ಮಾಡುತ್ತೇನೆ. ಅದಕ್ಕೆಲ್ಲಾ ಪುರುಸೊತ್ತೂ ಇಲ್ಲ’ ಎಂದಿದ್ದಾರೆ.

ಹಾಗಿದ್ದರೆ ರಣಬೀರ್ ಕಪೂರ್,  ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಹೆಸರು ಕೊಟ್ಟರೆ ಯಾರನ್ನು ಕಳೆಯುತ್ತೀರಿ, ಮದುವೆಯಾಗುತ್ತೀರಿ ಮತ್ತು ಪಡೆದುಕೊಳ್ಳಲು ಬಯಸುತ್ತೀರಿ ಎಂದು ಕರಣ್ ಕೇಳಿದರು. ಈಗ ಬಂತು ನೋಡಿ ಸಾನಿಯಾ ಮಾಸ್ಟರ್ ಸ್ಟ್ರೋಕ್! “ಶಾಹಿದ್ ರನ್ನು ಕಳೆದುಕೊಳ್ಳುತ್ತೇನೆ,  ರಣವೀರ್ ಸಿಂಗ್ ರನ್ನು ಪಡೆದುಕೊಳ್ಳುತ್ತೇನೆ. ಆದರೆ ರಣಬೀರ್ ಕಪೂರ್ ಸಿಕ್ಕರೆ ಮದುವೆಯಾಗಲು ಬಯಸುತ್ತೇನೆ!” ಎಂದುತ್ತರಿಸಿದ್ದಾರೆ.  ಹಲೋ ಮಿಸ್ಟರ್ ಶೊಯೇಬ್ ಮಲಿಕ್ ಕೇಳಿಸಿಕೊಂಡಿದ್ದೀರಲ್ಲಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಭಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ!