Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ಭಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ!

ಟೀಂ ಇಂಡಿಯಾದ ಭಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ!
Hyderabad , ಸೋಮವಾರ, 6 ಫೆಬ್ರವರಿ 2017 (09:44 IST)
ಹೈದರಾಬಾದ್: ಫೆಬ್ರವರಿ 9 ರಿಂದ ಪ್ರಾರಂಭವಾಗಲಿರುವ ಏಕಮಾತ್ರ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಭಾರತಕ್ಕೆ ಬಂದಿಳಿದಿದೆ. ಆದರೆ ಟೀಂ ಇಂಡಿಯಾದ ಫಾರ್ಮ್ ನೋಡಿ ಭಯದಲ್ಲಿದೆ.

 
ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ತಂಡವಾಗಿರುವ ಭಾರತ ತಂಡವನ್ನು ಎದುರಿಸುವುದು ಹೇಗೆಂಬುದೇ ಅದಕ್ಕೆ ದೊಡ್ಡ ಚಿಂತೆಯಾಗಿದೆ. ‘ನಮಗೆ ಗೊತ್ತು ಭಾರತ ಪ್ರವಾಸ ನಿಜಕ್ಕೂ ಕಷ್ಟಕರ. ಅವರ ಜತೆ ಗೆಲುವು ಸಾಧ್ಯವಿಲ್ಲದಿದ್ದರೂ, ಕನಿಷ್ಠ ಉತ್ತಮ ಪೈಪೋಟಿ ನೀಡುವ ವಿಶ್ವಾಸ ನಮ್ಮದು’ ಎಂದು ಪ್ರಮುಖ ಆಟಗಾರ ಶಕೀಬ್ ಅಲ್ ಹಸನ್ ಹೇಳಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದೊಂದಿಗೆ ಉತ್ತಮ ಆಟವಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಐಪಿಎಲ್ ನಲ್ಲಿ ಇಲ್ಲಿ ಆಡಿದ ಅನುಭವ ನಮಗೆ ಸಹಾಯವಾದೀತು. ಆದರೆ ಇತ್ತೀಚೆಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾದ ಇತರ ಆಟಗಾರರ ಪ್ರದರ್ಶನವನ್ನು ಮೆಚ್ಚಿಕೊಳ್ಳಲೇಬೇಕು. ಅವರ ಎದುರು ಆಡುವುದು ಸುಲಭವಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭುವನೇಶ್ವರ್ ಕುಮಾರ್ ಸ್ವಿಂಗ್ ಬೌಲಿಂಗ್ ಗೂ ಪತ್ನಿಯ ಮೂಡ್ ಬದಲಾವಣೆಗೂ ಎತ್ತಣ ಸಂಬಂಧವಯ್ಯಾ?!