Select Your Language

Notifications

webdunia
webdunia
webdunia
webdunia

ಭುವನೇಶ್ವರ್ ಕುಮಾರ್ ಸ್ವಿಂಗ್ ಬೌಲಿಂಗ್ ಗೂ ಪತ್ನಿಯ ಮೂಡ್ ಬದಲಾವಣೆಗೂ ಎತ್ತಣ ಸಂಬಂಧವಯ್ಯಾ?!

ಭುವನೇಶ್ವರ್ ಕುಮಾರ್ ಸ್ವಿಂಗ್ ಬೌಲಿಂಗ್ ಗೂ  ಪತ್ನಿಯ ಮೂಡ್ ಬದಲಾವಣೆಗೂ ಎತ್ತಣ ಸಂಬಂಧವಯ್ಯಾ?!
NewDelhi , ಸೋಮವಾರ, 6 ಫೆಬ್ರವರಿ 2017 (09:26 IST)
ನವದೆಹಲಿ:  ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೆಲವೊಮ್ಮೆ ಅದೆಂತೆಂತಹಾ ಉಪಮೆ ಹುಡುಕಿ ಟ್ವಿಟರ್ ನಲ್ಲಿ ಬರೆಯುತ್ತಾರೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗೆ ಜನ್ಮದಿನ ಸಂದೇಶ ಕಳುಹಿಸಿರುವ ವೀರೂ ಹೋಲಿಕೆಯಂತೂ ಓದುಗರನ್ನು ನಗೆಗಡಲಲ್ಲಿ ತೇಲಿಸಿದೆ.

 
ಭುವನೇಶ್ವರ್ ಕುಮಾರ್ ಗೆ ನಿನ್ನೆ ಜನುಮ ದಿನ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ವೇಗಿಗೆ ಶುಭ ಹಾರೈಸಿದ ಸೆಹ್ವಾಗ್ ಭುವಿ ರಿವರ್ಸ್ ಸ್ವಿಂಗ್ ಗಳು ಪತ್ನಿಯ ಮೂಡ್ ಸ್ವಿಂಗ್ ನಂತೆ. ಹೇಗೆ, ಯಾವಾಗ ತಿರುವು ಪಡೆಯುತ್ತದೆ ಎಂದೇ ಗೊತ್ತಾಗಲ್ಲ ಎಂದು ವೀರೂ ಫನ್ನಿಯಾಗಿ ಮೆಸೇಜ್ ಮಾಡಿದ್ದಾರೆ.

ಉತ್ತರ ಪ್ರದೇಶದ ಬೌಲರ್ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾದ ಪ್ರಮುಖ ವೇಗಿಗಳಲ್ಲೊಬ್ಬರು. ಅಲ್ಲದೆ ಉತ್ತಮವಾಗಿ ಬಾಲ್ ಸ್ವಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಅದಕ್ಕೇ ವೀರೂ ಅವರದೇ ಶೈಲಿಯಲ್ಲಿ ಈ ರೀತಿ ಮೆಸೇಜ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ವಿಚಾರದಲ್ಲಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೋಲ್ಡ್ ಉತ್ತರ ನೋಡಿ!