Select Your Language

Notifications

webdunia
webdunia
webdunia
webdunia

ಮತ್ತೆ ಅಂತಾರಾಷ್ಟ್ರೀಯ ಟೆನಿಸ್ ಅಂಕಣಕ್ಕೆ ಸಾನಿಯಾ ಮಿರ್ಜಾ: ಅಮ್ಮನಾದ ಬಳಿಕ ಮೊದಲ ಮ್ಯಾಚ್

webdunia
ಸೋಮವಾರ, 13 ಜನವರಿ 2020 (09:32 IST)
ಹೈದರಾಬಾದ್: ಮಗುವಾದ ಬಳಿಕ ಟೆನಿಸ್ ಅಂಕಣದಿಂದ ದೂರವುಳಿದಿದ್ದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಾಳೆಯಿಂದ ಅಂತಾರಾಷ್ಟ್ರೀಯ ಕಣಕ್ಕೆ ಮರಳಲಿದ್ದಾರೆ.


ನಾಳೆ ಆರಂಭವಾಗಲಿರುವ ಹೋಬರ್ಟ್ ಇಂಟರ್ನ್ಯಾಷನಲ್ ಟೆನಿಸ್ ಕೂಟದ ಡಬಲ್ಸ್ ವಿಭಾಗದಲ್ಲಿ ಉಕ್ರೇನ್ ನ ನಾದಿಯಾ ಕಿಚೆನಾಕ್ ಜತೆಗೂಡಿ ಅವರು ಆಡಲಿದ್ದಾರೆ. ಈ ಮೂಲಕ ಎರಡು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಸಾನಿಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಈ ದಿನಗಳಲ್ಲಿ ಅವರು ಆಡದೇ ಇದ್ದರೂ ಫಿಟ್ನೆಸ್ ಕಾಯ್ದುಕೊಂಡಿದ್ದರು. ಹೀಗಾಗಿ ಬಹುಶಃ ಅವರಿಗೆ ಇದು ಕಷ್ಟವಾಗಲಾರದು. ಇವರಿಗೆ ಜಪಾನ್ ತಾರೆ ಮಿಯು ಕಟೋವಾ ಮತ್ತು ಜಾರ್ಜಿಯಾದ ಒಕ್ಸಾನಾ ಕಲಶಿನಿಕೊವಾ ಎದುರಾಳಿಯಾಗಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಕಿವೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದಕ್ಕೆ ಆಕ್ರೋಶ