Select Your Language

Notifications

webdunia
webdunia
webdunia
webdunia

ಮಗನ ಬಿಟ್ಟು ಅಭ್ಯಾಸಕ್ಕೆ ಹೋಗೋದೇ ಕಷ್ಟವಾಗ್ತಿದೆಯಂತೆ ಸಾನಿಯಾ ಮಿರ್ಜಾಗೆ

ಮಗನ ಬಿಟ್ಟು ಅಭ್ಯಾಸಕ್ಕೆ ಹೋಗೋದೇ ಕಷ್ಟವಾಗ್ತಿದೆಯಂತೆ ಸಾನಿಯಾ ಮಿರ್ಜಾಗೆ
ಹೈದರಾಬಾದ್ , ಗುರುವಾರ, 20 ಡಿಸೆಂಬರ್ 2018 (10:22 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಗಂಡು ಮಗುವಾಗಿದ್ದು, ಇಝಾನ್ ಎಂದು ಹೆಸರು ಬಹಿರಂಗಪಡಿಸಿದ್ದರು.


ಮಗುವಾದ ಮೇಲೂ ತಾನು ಟೆನಿಸ್ ಅಂಕಣಕ್ಕೆ ಇಳಿಯುವುದಾಗಿ ಸಾನಿಯಾ ಈ ಮೊದಲೇ ಹೇಳಿದ್ದರು. ಆದರೆ ಈಗ ಅದ್ಯಾಕೋ ಸಾನಿಯಾಗೆ ಮಗನನ್ನು ಬಿಟ್ಟು ಅಭ್ಯಾಸಕ್ಕೆ ಹೋಗಲು ತುಂಬಾ ಕಷ್ಟವಾಗ್ತಿದೆಯಂತೆ.

ಅವನನ್ನು ಅರೆಕ್ಷಣ ಬಿಟ್ಟು ಹೋಗಲೂ ಮನಸ್ಸಾಗುತ್ತಿಲ್ಲ. ಇದೊಂದೇ ಗಳಿಗೆಗಾಗಿ ನಾನು ಮರಳಿ ಮನೆಗೆ ಮರಳುತ್ತೇನೆ ಎಂದು ಪುಟ್ಟ ಕಂದನನ್ನು ಎದೆಗೆ ಅವಚಿಕೊಂಡು ಹಿಡಿದ ಫೋಟೋವನ್ನು ಸಾನಿಯಾ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಮಗನ ಫೋಟೋ ಸೆರೆ ಹಿಡಿಯಲು ಕ್ಯಾಮರಾ ಕಣ್ಣುಗಳು ಸದಾ ಕಾಯುತ್ತಿರುತ್ತವೆ ಎಂದು ಗೊತ್ತಿದ್ದ ಕಾರಣ ಸಾನಿಯಾ ಅವನನ್ನು ಅವರಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಿನ್ನೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡುಬಂದ ಸಾನಿಯಾ ಮಗನನ್ನು ಯಾರ ಕಣ್ಣಿಗೂ ಬೀಳದಂತೆ ಸ್ವೆಟರ್ ಹಾಕಿ ಸಂಪೂರ್ಣ ಕವರ್ ಮಾಡಿ ಎದೆಗೆ ಅವಚಿಕೊಂಡು ಬೇಗ ಬೇಗನೇ ಜಾಗ ಖಾಲಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಷ್ಟಕ್ಕೂ ಯುವರಾಜ್ ಸಿಂಗ್ ರನ್ನು ಕೊಳ್ಳಲು ಮುಂಬೈ ಇಂಡಿಯನ್ಸ್ ಮನಸ್ಸು ಮಾಡಿದ್ದೇಕೆ?