ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರಿಯೋ ಓಲಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳಿಗೆ ತಲಾ 1.01 ಲಕ್ಷ ಹಣವನ್ನು ನೀಡಲಿದ್ದಾರೆ.
ರಿಯೋ ಓಲಂಪಿಕ್ಸ್ನಲ್ಲಿ ಭಾರತದ ಸದ್ಭಾವನಾ ರಾಯಭಾರಿಯಾಗಿದ್ದ ಸಲ್ಮಾನ್ ಖಾನ್ ಕಳೆದ ತಿಂಗಳ ಆರಂಭದಲ್ಲಿ ಪ್ರತಿ ಕ್ರೀಡಾಪಟುವಿಗೆ 1,01,000 ರೂಪಾಯಿಯ ಚೆಕ್ ನೀಡುವುದಾಗಿ ವಾಗ್ದಾನ ಮಾಡಿದ್ದರು.
ಈ ವಾಗ್ದಾನವನ್ನು ಪೂರೈಸಲು ಹೊರಟಿರುವ ಅವರು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ವಿವರಗಳನ್ನು ತಮಗೆ ಕಳುಹಿಸುವಂತೆ ಭಾರತೀಯ ಒಲಂಪಿಕ್ ಅಸೋಸಿಯೇಷನ್ಗೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮನ್ನು ಸದ್ಭಾವನಾ ರಾಯಭಾರಿಯಾಗಿ ನೇಮಿಸಿದ್ದಕ್ಕೆ ಐಓಎಗೆ ಧನ್ಯವಾದಗಳನ್ನು ಸಮರ್ಪಿಸಿರುವ ಸಲ್ಮಾನ್ ನನಗೆ ಸೋಮವಾರ ಪತ್ರವೊಂದನ್ನು ಕಳುಹಿಸಿದ್ದಾರೆ. ಅದರಲ್ಲಿ ಈ ಬಾರಿಯ ಓಲಂಪಿಕ್ಸ್ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ವಿವರಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬ ಆಟಗಾರರಿಗೆ 1 ಲಕ್ಷದ 1 ಸಾವಿರ ರೂಪಾಯಿಗಳನ್ನು ನೀಡುತ್ತೇನೆ ಎಂದು ಬರೆದಿದ್ದಾರೆ. ರಿಯೋ ಓಲಂಪಿಕ್ ಹೆಸರಲ್ಲಿ ಅವರು ಚೆಕ್ ಕಳುಹಿಸಲಿದ್ದಾರೆ. ಅದನ್ನು ನಾವು ಕ್ರೀಡಾಪಟುಗಳಿಗೆ ವಿತರಿಸಲಿದ್ದೇವೆ ಎಂದು ಐಓಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.