ಭಾರತದ ಪ್ರಥಮ ಶ್ರೇಯಾಂಕಿತ ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು ಈ ವರ್ಷದಾಂತ್ಯದಲ್ಲಿ ಸ್ಪರ್ಧಾಕಣಕ್ಕೆ ಮರಳುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.
ಹಿಂದೆಂದಿಗಿಂತಲೂ ಪ್ರಬಲವಾಗಿ ನಾನು ಮರಳಲಿದ್ದೇನೆ. ಈ ಹಿಂದಿನ 5-6 ವರ್ಷ ತೋರಿದ ಪ್ರದರ್ಶನಕ್ಕಿಂತ ಮುಂದಿನ 2-3 ವರ್ಷಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಭರವಸೆ ನನಗಿದೆ ಎಂದು ಅವರು ಗುರುವಾರ ಹೇಳಿದ್ದಾರೆ.
ಡಿಸೆಂಬರ್ ವೇಳೆಗೆ ತಾವು ಸಂಪೂರ್ಣವಾಗಿ ಫಿಟ್ ಆಗುವ ಭರವಸೆ ವ್ಯಕ್ತ ಪಡಿಸಿದ ಅವರು ಎಲ್ಲವು ಅಂದುಕೊಂಡಂತೆ ಆದರೆವರ್ಷಾಂತ್ಯದಲ್ಲಿ ನಡೆಯಲಿರುವ ದುಬೈ ವಿಶ್ವ ಸೂಪರ್‌ಸೀರಿಸ್ ಫೈನಲ್ಸ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕಳಾಗಿದ್ದೇನೆ. 100 ಪ್ರತಿಶತ ಫಿಟ್ ಎನ್ನಿಸಿದ ಮೇಲೆ ಅಷ್ಟೇ ಮಾತ್ರ ನಾನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ ಅವರು.
ವಿಶ್ವದ ಮಾಜಿ ನಂಬರ್ 1 ಶ್ರೇಯಾಂಕಿತೆ ಸೈನಾ ಮೊಣಕಾಲು ನೋವಿನಿಂದಾಗಿ ರಿಯೋ ಓಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸಾಧನೆ ತೋರಲಾಗದೆ ಮರಳಿದ್ದರು.
ತವರಿಗೆ ಮರಳುತ್ತಿದ್ದಂತೆ ಅವರು ಮುಂಬೈನಲ್ಲಿರುವ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ