Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಓಪನ್ ಟೆನಿಸ್ ನಲ್ಲಿ ರೋಹನ್ ಬೋಪಣ್ಣ ಜೋಡಿ ಎರಡನೇ ಸುತ್ತಿಗೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ನಲ್ಲಿ ರೋಹನ್ ಬೋಪಣ್ಣ ಜೋಡಿ ಎರಡನೇ ಸುತ್ತಿಗೆ
Sydney , ಬುಧವಾರ, 18 ಜನವರಿ 2017 (11:26 IST)
ಸಿಡ್ನಿ: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಪಂದ್ಯದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೋ ಕ್ಯುವಾಸ್ ಜೋಡಿ  ಮೊದಲ ಸುತ್ತಿನಲ್ಲಿ ಜಯಗಳಿಸಿದ್ದು, ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.

ಮೊದಲ ಸುತ್ತಿನಲ್ಲಿ ಬೋಪಣ್ಣ ಜೋಡಿ ಥಾಮಸ್ ಬಲೂಕಿ ಮತ್ತು ಮ್ಯಾಕ್ಸಿಮೊ ಗೊಂಝಾಲೆಜ್ ಜೋಡಿಯನ್ನು 6-4, 7-6 ಅಂತರದಿಂದ ಸೋಲಿಸಿ ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.  ಇದು ಅತ್ಯಂತ ಕಠಿಣ ಸ್ಪರ್ಧೆಯಾಗಿತ್ತು. ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ನಿರ್ಣಾಯಕ ಟೈ ಬ್ರೇಕರ್ ನಲ್ಲಿ ಬೋಪಣ್ಣ ಜೋಡಿ ಪಂದ್ಯ ತಮ್ಮದಾಗಿಸಿಕೊಂಡಿತು.

ಇನ್ನು, ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಬಾರ್ಬೊರಾ ಸ್ಟ್ರೈಕೋವಾ ಜೋಡಿ ಸ್ಪರ್ಧಿಸುತ್ತಿದೆ. ಈ ಪಂದ್ಯ ಇಂದು ನಡಯಲಿದ್ದು, ವಿಶ್ವ ನಂ.2 ಸಾನಿಯಾ ಮತ್ತು ಬಾರ್ಬೊರಾ  ಬ್ರಿಟನ್ ನ ಜಾಸ್ಲಿನ್ ರಾಯ್ ಮತ್ತು ಅನಾ ಸ್ಮಿತ್ ರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತವನ್ನು ಮಣಿಸಲು ಭಾರತದ್ದೇ ಅಸ್ತ್ರ