Select Your Language

Notifications

webdunia
webdunia
webdunia
webdunia

ಭಾರತವನ್ನು ಮಣಿಸಲು ಭಾರತದ್ದೇ ಅಸ್ತ್ರ

ಭಾರತವನ್ನು ಮಣಿಸಲು ಭಾರತದ್ದೇ ಅಸ್ತ್ರ
ನವದೆಹಲಿ , ಬುಧವಾರ, 18 ಜನವರಿ 2017 (11:07 IST)
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವೈಟ್ ಜರ್ಸಿಯಲ್ಲಿ ಈಗಾಗಲೇ ವಿಶ್ವದ ನಂಬರ್ 1 ಪಟ್ಟವನ್ನು ಪಡೆದುಕೊಂಡಿದೆ. 
ತವರಿನಲ್ಲಂತೂ ಕೊಹ್ಲಿ ಪಡೆಯನ್ನು ಸೋಲಿಸುವುದು ಎದುರಾಳಿಗಳಿಗೆ ಕನಸಿನ ಮಾತಂತಾಗಿದೆ. ಆದರೆ ಯಾವುದೇ ರೀತಿಯಲ್ಲೂ ಭಾರತವನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಆಸ್ಟ್ರೇಲಿಯಾ ಹೊಸ ತಂತ್ರಗಾರಿಕೆಯನ್ನು ಬಳಸಿಕೊಂಡಿದೆ. ಭಾರತದ 
ಅಸ್ತ್ರದಿಂದಲೇ ಭಾರತವನ್ನು ನೆಲಕಚ್ಚಿಸುವ ರಣತಂತ್ರ ಹೂಡಿದೆ.
ಹೌದು, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಶ್ರೀರಾಮ್ ಶ್ರೀಧರನ್ ಅವರನ್ನು ಆಸ್ಟೇಲಿಯಾ ಸ್ಪಿನ್ ಕನ್ಸಲ್ಟೆಂಟ್ ಆಗಿ ನೇಮಿಸಿಕೊಂಡಿದೆ. 2000-04ರವರೆಗೆ ಭಾರತದ ತಂಡದಲ್ಲಿ ಆಡಿರುವ ತಮಿಳುನಾಡು ಆಟಗಾರ 8 ಏಕದಿನ ಪಂದ್ಯಗಳನ್ನಾಡಿ 9 ವಿಕೆಟ್ ಕಿತ್ತಿದ್ದಾರೆ. ಲೆಫ್ಟ್ ಆರ್ಮ್ ಸ್ಪಿನ್ನರ್ ಆಗಿರುವ ಅವರಿಗೆ ಭಾರತೀಯ ಸ್ಪಿನ್ ಟ್ರ್ಯಾಕ್‌ನಲ್ಲಿ ಹೇಗೆ ಆಡಬೇಕು ಎಂಬ ಬಗ್ಗೆ ಚೆನ್ನಾಗಿ ಗೊತ್ತಿದೆ.

ಆಸೀಸ್ ಗೆಲುವು ಸಾಧಿಸುವದನ್ನು ನಿಶ್ಚಿತ ಮಾಡುವುದೇ ತಮ್ಮ ಗುರಿ ಎನ್ನುತ್ತಿರುವ ಶ್ರೀರಾಮ್ ಈ ಹಿಂದೆ ತಾವೇ ಸದಸ್ಯರಾಗಿದ್ದ 
ತಂಡಕ್ಕೆ ಮುಳುವಾಗುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.
 
ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಶ್ರೀಧರನ್‌ ಜತೆ ಕೈ ಜೋಡಿಸಲಿದ್ದಾರೆ. 2012ರಲ್ಲಿ ಇಂಗ್ಲೆಂಡ್ ಭಾರತದಲ್ಲಿ ಸರಣಿ  ಗೆಲ್ಲೋಕೆ ಕಾರಣ ಪನೇಸರ್ ಕೈ ಚಳಕ. ಭಾರತದಲ್ಲಿ ಉತ್ತಮ ದಾಖಲೆ ಹೊಂದಿರುವ ಪನೇಸರ್ ಇಂಡಿಯನ್ ಪಿಚ್‌ ಸ್ವರೂಪದ ಬಗ್ಗೆ  ಚೆನ್ನಾಗಿ ಅರಿತಿದ್ದಾರೆ. ಇವರೀರ್ವರ ಅನುಭವವನ್ನು ಬಳಸಿಕೊಂಡು ಕೊಹ್ಲಿ ಪಡೆಯನ್ನು ಹೆಡೆಮುರಿ ಕಟ್ಟುವುದು ಸ್ಮಿತ್ ಪಡೆ ಉದ್ದೇಶವಾಗಿದೆ. 
 
ಭಾರತದ ಸ್ಪಿನ್ ಬೌಲರ್ ಗಳನ್ನು ಎದುರಿಸುವುದು ಹೇಗೆ, ಸ್ಪಿನ್ ಬೌಲಿಂಗ್ ಹೇಗೆ ಮಾಡಬೇಕು ಎಂದು ಆಸೀಸ್ ತಂಡದವರಿಗೆ 
ಭಾರತೀಯ ಮತ್ತು ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ವಿಶೇಷವಾಗಿ ಪಾಠ ಹೇಳಿಕೊಡಲಿದ್ದಾರಂತೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಸಿಎ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕರಿಸಿದ್ದಕ್ಕೆ ಹೈಕೋರ್ಟ್ ಮೊರೆ ಹೋದ ಮೊಹಮ್ಮದ್ ಅಜರುದ್ದೀನ್