Select Your Language

Notifications

webdunia
webdunia
webdunia
webdunia

ರಿಯೋ ಒಲಿಂಪಿಕ್ಸ್: ದೇಶಕ್ಕೆ ಮೊದಲ ಪದಕ ತಂದ ಹೆಮ್ಮೆಯ ಪುತ್ರಿ ಸಾಕ್ಷಿ ಮಲಿಕ್‌

ರಿಯೋ ಒಲಿಂಪಿಕ್ಸ್: ದೇಶಕ್ಕೆ ಮೊದಲ ಪದಕ ತಂದ ಹೆಮ್ಮೆಯ ಪುತ್ರಿ ಸಾಕ್ಷಿ ಮಲಿಕ್‌
ರಿಯೋ ಡಿ ಜನೈರೋ , ಗುರುವಾರ, 18 ಆಗಸ್ಟ್ 2016 (13:52 IST)
ರಿಯೋ ಒಲಿಂಪಿಕ್ಸ್ ಪಂದ್ಯಾವಳಿಯ ಕುಸ್ತಿ ವಿಭಾಗದಲ್ಲಿ ದೇಶದ ಹೆಮ್ಮೆಯ ಪುತ್ರಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟು ಪದಕದ ಬರ ನೀಗಿಸಿದ್ದಾರೆ.
ರೋಹ್ಟಕ್ ಮೂಲದ 23 ವರ್ಷ ವಯಸ್ಸಿನ ಸಾಕ್ಷಿ ಮಲಿಕ್, 58 ಕೆಜಿ ವಿಭಾಗದಲ್ಲಿ ತಮ್ಮ ಎದುರಾಳಿ ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ವಿರುದ್ಧ 8-5 ಅಂಕಗಳ ಅಂತರದಿಂದ ಜಯಗಳಿಸಿದ್ದಾರೆ. 
 
ಒಲಿಂಪಿಕ್ ಪದಕ ಗೆದ್ದ ಭಾರತದ ಮಹಿಳೆ ಕ್ರೀಡಾಪಟುಗಳಲ್ಲಿ ಸಾಕ್ಷಿ ಮಲಿಕ್ ನಾಲ್ಕನೇಯವರಾಗಿದ್ದಾರೆ. ಕರ್ಣಂ ಮಲ್ಲೇಶ್ವರಿ, ಬಾಕ್ಸರ್ ಮೇರಿ ಕೋಮ್, ಸೈನಾ ನೆಹ್ವಾಲ್ ಒಲಿಪಿಂಕ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಾಗಿದ್ದಾರೆ. 
 
ಸ್ಪರ್ಧೆಯ ಆರಂಭದಿಂದಲೂ ಆಕ್ರಮಣಕಾರಿಯಾಗಿದ್ದ ಕಿರ್ಗಿಸ್ತಾನದ ಕುಸ್ತಿಪಟು ಐಸಿಲೂ ಟೈನೀಬೆಕೋವಾ ಗೆಲ್ಲುವುದು ಖಚಿತ ಎನ್ನುವ ಭಾವನೆ ಮೂಡಿಸಿದ್ದರು. ಆದರೆ, ಸ್ಪರ್ಧೆಯ ಕೊನೆಯ ಕೆಲವೇ ಸೆಕೆಂಡ್‌ಗಳಲ್ಲಿ ತಿರುಗೇಟು ನೀಡಿದ ಸಾಕ್ಷಿ ಎದುರಾಳಿಯನ್ನು ಸೋಲಿನ ಅಂಚಿಗೆ ತಳ್ಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಿಗದಿತ ಓವರ್‌ಗಳ ಗುರಿ ತಲುಪಲು ವಿಫಲವಾದ ಪಾಕ್ ತಂಡಕ್ಕೆ ದಂಡ ಹೇರಿದ ಐಸಿಸಿ