ದಿ ಓವೆಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿಗದಿತ ಓವರ್‌ಗಳ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದ್ದರಿಂದ ಪಾಕಿಸ್ತಾನ ತಂಡಕ್ಕೆ ದಂಡ ಹೇರಿ ಐಸಿಸಿ ಆದೇಶ ಹೊರಡಿಸಿದೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು 2-2 ಸಮಬಲ ಮಾಡಿಕೊಂಡ ಪಾಕಿಸ್ತಾನ ತಂಡ 158 ಓವರ್‌ಗಳ ಗುರಿಯನ್ನು ಕ್ರಮಿಸಬೇಕಾಗಿತ್ತು. ಆದರೆ, ಒಂದು ಓವರ್ ಕೊರತೆಯ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಮ್ಯಾಚ್ ರೆಪ್ರಿ ರಿಚಿ ರಿಚರ್ಡ್ಸನ್ ಪಾಕ್ ತಂಡಕ್ಕೆ ದಂಡ ಹೇರಿದ್ದಾರೆ.
ಐಸಿಸಿ ನೀತಿ ಸಂಹಿತೆ ಅನ್ವಯ ತಂಡದ ಪ್ರತಿಯೊಬ್ಬ ಆಟಗಾರರಿಗೆ ಪಂದ್ಯದ ಶುಲ್ಕ ಮೊತ್ತದ ಶೇ.10 ರಷ್ಟು ದಂಡ ಪಾವತಿ,ಬೇಕಾಗುತ್ತದೆ. ತಂಡದ ನಾಯಕ ಪಂದ್ಯದ ಶುಲ್ಕದಲ್ಲಿ ಶೇ.20 ರಷ್ಟು ದಂಡ ತೆರಬೇಕಾಗುತ್ತದೆ.
ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್, ಮ್ಯಾಚ್ ರೆಫ್ರಿ ನಿರ್ಣಯಕ್ಕೆ ತಲೆಬಾಗಿ ಶೇ.20 ರಷ್ಟು ದಂಡವನ್ನು ತೆರಲು ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ, ಮಿಸ್ಬಾ ಉಲ್ ಹಕ್ ನೇತೃತ್ವದ ತಂಡ 12 ತಿಂಗಳ ಅವಧಿಯಲ್ಲಿ ಮತ್ತೊಂದು ಬಾರಿ ನಿಧಾನಗತಿಯ ಬೌಲಿಂಗ್ ಆರೋಪಕ್ಕೆ ಸಿಲುಕಿದಲ್ಲಿ ಮಿಸ್ಬಾ ಉಲ್ ಹಕ್ ಅಮಾನತ್ತು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ