Select Your Language

Notifications

webdunia
webdunia
webdunia
webdunia

ರಿಯೋ ಒಲಿಂಪಿಕ್ಸ್: ಕುಸ್ತಿಪಟು ನರಸಿಂಗ್ ಯಾದವ್ ಬದಲಿಗೆ ಪರ್ವೀನ್ ರಾಣಾ

ರಿಯೋ ಒಲಿಂಪಿಕ್ಸ್: ಕುಸ್ತಿಪಟು ನರಸಿಂಗ್ ಯಾದವ್ ಬದಲಿಗೆ ಪರ್ವೀನ್ ರಾಣಾ
ನವದೆಹಲಿ , ಬುಧವಾರ, 27 ಜುಲೈ 2016 (11:29 IST)
2016ರ ರಿಯೋ ಒಲಿಂಪಿಕ್ಸ್ 74 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಉದ್ದೀಪನ ಮದ್ದು ಸೇವನೆ ಕಳಂಕಿತರಾದ ನರಸಿಂಗ್ ಯಾದವ್ ಬದಲಿಗೆ ಕುಸ್ತಿಪಟು ಪರ್ವೀನ್ ರಾಣಾ ಅವರನ್ನು ಕಳಿಸಲಾಗುತ್ತದೆ ಎಂದು ಸಂಯುಕ್ತ ವಿಶ್ವ ಕುಸ್ತಿ ಒಕ್ಕೂಟ ಮಂಗಳವಾರ ದೃಢಪಡಿಸಿದೆ.
 
 ಲಾಸ್ ವೆಗಾಸ್‌ನಲ್ಲಿ 2015ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಯಾದವ್ ಅವರನ್ನು ನಿಷೇಧಿತ ಸ್ಟೆರಾಯ್ಡ್ ಸೇವನೆಯ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಐಒಎ ತಾತ್ಕಾಲಿಕ ಅಮಾನತುಗೊಳಿಸಿದೆ. ಯಾದವ್ ಅನಾಬಲಿಕ್ ಸ್ಟೆರಾಯ್ಡ್ ಮೆಥಾಂಡಿನೋನ್ ಸೇವಿಸಿದ್ದೆಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಯಾದವ್ ಬದಲಿಗೆ ರಾಣಾರನ್ನು ತಾವು ಕಳಿಸುವುದಾಗಿ ಐಒಎ ಸಂಯುಕ್ತ ವಿಶ್ವ ಕುಸ್ತಿ ಒಕ್ಕೂಟಕ್ಕೆ  ತಿಳಿಸಿದೆ.
 
 ಯಾದವ್ ಅವರು ರಾಣಾ ಅವರನ್ನು 74 ಕೆಜಿ ವಿಭಾಗದಲ್ಲಿ ಸೋಲಿಸಿ 2015ರ ವಿಶ್ವಚಾಂಪಿಯನ್‌ಷಿಪ್‌ಗೆ ಸ್ಥಾನ ಪಡೆದಿದ್ದರು.
ರಿಯೋ ಕ್ರೀಡಾಕೂಟಕ್ಕೆ ಮುನ್ನ ಯಾದವ್ ಸುದ್ದಿಯಲ್ಲಿದ್ದು, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಕೂಡ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಬಯಸಿದ್ದರು. ಈ ಕುರಿತು ಯಾದವ್ ವಿರುದ್ಧ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದರು ಮತ್ತು ಡೆಲ್ಲಿ ಹೈಕೋರ್ಟ್‌ನಲ್ಲಿ ಕೂಡ ಅಪೀಲು ಮಾಡಿದ್ದರು. ಆದರೆ ಭಾರತ ಕುಸ್ತಿ ಒಕ್ಕೂಟ ಯಾದವ್ ಅವರನ್ನು ರಿಯೊ ಡಿಜನೈರೊಗೆ ಕಳಿಸಲು ನಿರ್ಧರಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮುರಳೀಧರನ್ ಆಸ್ಟ್ರೇಲಿಯಾ ಬೌಲಿಂಗ್ ಸಲಹೆಗಾರ ವೃತ್ತಿಗೆ ತೆರೆ