Select Your Language

Notifications

webdunia
webdunia
webdunia
webdunia

ಮುರಳೀಧರನ್ ಆಸ್ಟ್ರೇಲಿಯಾ ಬೌಲಿಂಗ್ ಸಲಹೆಗಾರ ವೃತ್ತಿಗೆ ತೆರೆ

ಮುರಳೀಧರನ್ ಆಸ್ಟ್ರೇಲಿಯಾ ಬೌಲಿಂಗ್ ಸಲಹೆಗಾರ ವೃತ್ತಿಗೆ ತೆರೆ
ಕೊಲಂಬೊ: , ಬುಧವಾರ, 27 ಜುಲೈ 2016 (10:40 IST)
ಶ್ರೀಲಂಕಾ  ಮಾಜಿ ಸ್ಟಾರ್ ಸ್ಪಿನ್ನರ್ ಮುರಳೀಧರನ್ ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ಸಲಹೆಗಾರರಾಗಿ ಮುಂದುವರಿಕೆಯು ಪಲ್ಲೆಕೆಲೆಯಲ್ಲಿ ಮೊದಲ ಟೆಸ್ಟ್‌ಗೆ ಮುನ್ನವೇ ಕೊನೆಗೊಂಡಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿ ಆರಂಭದಲ್ಲೇ ವಿವಾದದ ಸುಳಿಗೆ ಸಿಕ್ಕಿ,  ಮುತ್ತಯ ಮುರಳೀಧರನ್ ಆಸೀಸ್ ಕ್ರಿಕೆಟರುಗಳಿಗೆ ನೆರವಾಗುತ್ತಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ಮುಖ್ಯಸ್ಥರಿಗೆ ಸಿಟ್ಟು ತರಿಸಿತ್ತು.

ಮುರಳಿಧರನ್ ಸರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದು, 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಕಬಳಿಸಿದ್ದಾರೆ.ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ತಿಲಂತಾ ಸುಮತಿಪಾಲಾ ಅವರು ಕೊಲಂಬೊದಲ್ಲಿ ಅನುಮತಿಯಿಲ್ಲದೇ ಅಭ್ಯಾಸದ ಪಿಚ್ ಬಳಸುವುದಕ್ಕೆ ಮುರಳೀಧರನ್ ನೆರವಾಗಿದ್ದಾರೆಂದು ಆರೋಪಿಸಿದ್ದರು.
 
ಸರಣಿಗೆ ಮುನ್ನ, ಮುರಳೀಧರನ್ ಅವರನ್ನು ಶ್ರೀಲಂಕಾಗೆ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬೌಲಿಂಗ್ ಸಲಹೆಗಾರರಾಗಿ ನೇಮಿಸಲಾಗಿತ್ತು.
 
 ಮುರಳೀಧರನ್ ಕ್ರಮದ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಆಸ್ಟ್ರೇಲಿಯಾ ಟೀಂಗೆ ದೂರು ನೀಡಿತ್ತು. ಆದರೆ ಮುರಳೀಧರನ್ ತಾವು ವೃತ್ತಿಪರ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು. ನಾನು ದ್ರೋಹಿಯಲ್ಲ. ಶ್ರೀಲಂಕಾ ನನ್ನ ಸೇವೆ ಬಳಸಿಕೊಳ್ಳದಿದ್ದರಿಂದ ನಾನು ಆಸ್ಟ್ರೇಲಿಯಾಕ್ಕೆ ಸ್ಪಿನ್‌ ಬೌಲಿಂಗ್‌ನಲ್ಲಿ ನೆರವಾಗುತ್ತಿದ್ದೇನೆ ಎಂದು ಹೇಳಿದ್ದರು.

 ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಎಸ್‌ಎಲ್‌ಸಿ ನಡುವೆ ಚರ್ಚೆ ನಡೆದು ಈ ವಿಷಯ ಇತ್ಯರ್ಥವಾಗಿದೆಯೆಂದು ಪರಿಗಣಿಸುವುದಾಗಿ ಸಿಎ ವಕ್ತಾರ ಹೇಳಿದರು. ಇದರಿಂದಾಗಿ ಮುರಳೀಧರನ್ ಆಸೀಸ್ ಸಲಹೆಗಾರ ಹುದ್ದೆಗೆ ವಿರಾಮ ಬಿದ್ದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನರಸಿಂಗ್ ಯಾದವ್ ಆಹಾರ ಪದಾರ್ಥಕ್ಕೆ ಮದ್ದು ಬೆರೆಸಿದ ವ್ಯಕ್ತಿ ಪತ್ತೆ