ರಿಯೊ ಡಿ ಜನೈರೊ: ಸಾಂಬಾ ನಾಡಿನಲ್ಲಿ ಒಲಿಂಪಿಕ್ ಜ್ಯೋತಿ ಬೆಳಗಿಸುವ ಮೂಲಕ ರಿಯೋ ಒಲಿಂಪಿಕ್ಸ್ 2016ರ ಅದ್ಧೂರಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು .ಸಿಡಿಮದ್ದುಗಳ ವರ್ಣರಂಜಿತ ಚಿತ್ತಾರದೊಂದಿಗೆ ರಿಯೋ ಒಲಿಂಪಿಕ್ಸ್ ಸಮಾರಂಭ ವರ್ಣರಂಜಿತಗೊಂಡಿತು. ಭಾರತದ ತ್ರಿವರ್ಣ ಧ್ವಜವನ್ನು ಶೂಟರ್ ಅಭಿನವ್ ಬಿಂದ್ರಾ ಹಿಡಿದು ಮುನ್ನಡೆಸಿದರು.
ಮಳೆಕಾಡು ಮತ್ತು ವೈವಿಧ್ಯಮಯ ಜನಸಂಖ್ಯೆಯ ಸೃಜನಾತ್ಮಕ ಶಕ್ತಿ ಉದ್ಘಾಟನಾ ಸಮಾರಂಭದಲ್ಲಿ ಅನಾವರಣಗೊಂಡಿತು. ಮರಕಾನಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಆರ್ಥಿಕ ಅಸಮಾನತೆಯ ದೇಶದಲ್ಲಿ ರಿಯೋ ಕಡಲದಂಡೆಗಳಲ್ಲಿ ನೆಲೆಗೊಂಡಿರುವ ಕೊಳೆಗೇರಿಗಳ ಸಂಸ್ಕೃತಿಯನ್ನೂ ಬಿಂಬಿಸಲಾಯಿತು. ಬ್ರೆಜಿಲ್ ಕಲೆ ಮತ್ತು ಸಂಸ್ಕೃತಿ ಅನಾವರಣಗೊಂಡಿತು.
ಪ್ರದರ್ಶನದಲ್ಲಿ ಸೂಪರ್ ಮಾಡೆಲ್ ಗಿಸೆಲೆ ಬಂಡ್‌ಚನ್ ಬೋಸೋನೋವಾ ಹಿಟ್'' ಗರ್ಲ್ ಫ್ರಂ ಇಪಾಮೆನಾ'' ಶಬ್ದದೊಂದಿಗೆ ಸ್ಟೇಡಿಯಂಗೆ ಆಗಮಿಸಿದರು. ಸಾಂಬಾ ಗೀತರಚನೆಕಾರ್ತಿ ಪಾಲಿನೊ ಡಾ ವಿಯೋಲಾ ಸ್ಟ್ರಿಂಗ್ ಆರ್‌ಕೇಸ್ಟ್ರಾದೊಂದಿಗೆ ರಾಷ್ಟ್ರಗೀತೆ ನುಡಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ