ಭಾರತೀಯ ಕ್ರೀಡೆಯ ಅಭಿಮಾನಿಗಳಿಗೆ 2016ರ ರಿಯೊ ಒಲಿಂಪಿಕ್ಸ್ ಮೂರನೇ ದಿನ ಒಂದರ ಹಿಂದೊಂದು ಎರಡು ಆಘಾತಕಾರಿ ಫಲಿತಾಂಶಗಳು ಬಂದಿವೆ. ಐರ್ಲೆಂಡ್ ತಂಡವನ್ನು ಶನಿವಾರ 3-2ರಿಂದ ಮೊದಲ ಗ್ರೂಪ್ ಪಂದ್ಯದಲ್ಲಿ ಸೋಲಿಸಿದ್ದ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ಪಂದ್ಯ ಮುಗಿಯಲು ಮೂರು ಸೆಕೆಂಡುಗಳು ಬಾಕಿವುಳಿದಿರುವಾಗ ಒಂದು ಗೋಲು ಬಿಟ್ಟುಕೊಟ್ಟಿದ್ದರಿಂದ ಜರ್ಮನಿ 2-1ರಿಂದ ಗೆಲುವು ಗಳಿಸಿತು.
ಸ್ವಲ್ಪ ಹೊತ್ತಿನಲ್ಲೇ ಶೂಟರ್ ಅಭಿನವ್ ಭಿಂದ್ರಾಗೆ ಪುರುಷರ 10 ಮೀ ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ 0.1 ಅಂಶಗಳಲ್ಲಿ ತಪ್ಪಿಹೋಗಿ ನಾಲ್ಕನೆಯ ಸ್ಥಾನ ಪಡೆದರು.
ಭಾರತದ ಹಾಕಿ ತಂಡಕ್ಕೆ ಇನ್ನೂ ನಾಲ್ಕು ಪಂದ್ಯಗಳು ಬಾಕಿವುಳಿದಿದ್ದರೂ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಿಂದ್ರಾ ಅವರ ಒಲಿಂಪಿಕ್‌ನ ಕೊನೆಯ ಪಾಲ್ಗೊಳ್ಳುವಿಕೆ ನಿರಾಶೆಯಿಂದ ಕೊನೆಗೊಂಡಿತು.
ದಿಯೋದರ್ ಪಾರ್ಕ್ ಒಲಿಂಪಿಕ್ ಹಾಕಿ ಕೇಂದ್ರದಲ್ಲಿ ಪುರುಷರ ಹಾಕಿ ತಂಡದ ತಡವಾಗಿ ಗೋಲುಗಳನ್ನು ಒಪ್ಪಿಸುವ ಪರಿಪಾಠ ಅವರನ್ನು ದುಃಸ್ವಪ್ನದಂತೆ ಕಾಡಿತು. ಆಟ ಮುಗಿಯುವುದಕ್ಕೆ ಕೊನೆಯ ಎರಡು ನಿಮಿಷಗಳಲ್ಲಿ ಜರ್ಮನಿ ತೀವ್ರ ಒತ್ತಡವನ್ನು ಹೇರಿತು. ಪಂದ್ಯದುದ್ದಕ್ಕೂ ಪರಿಪೂರ್ಣ ಹಾಕಿ ಆಡಿದ ಭಾರತ ಆಟ ಮುಗಿಯಲು 3.1 ಸೆಕೆಂಡ್‌ಗಳು ಬಾಕಿವುಳಿದಿರುವಾಗ ಗೋಲು ನೀಡಿದ್ದು ಎದೆಗುಂದುವಂತೆ ಮಾಡಿತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.